HEALTH TIPS

ಐರ್ಲೆಂಡ್‌ನಲ್ಲಿ 200 ವರ್ಷಗಳಷ್ಟು ಹಳೆಯ ಕೋಟೆ ಖರೀದಿಸಿದ ಮೆಟಾ CEO ಜುಕರ್‌ಬರ್ಗ್

 ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅವರು ಐರ್ಲೆಂಡ್‌ನಲ್ಲಿ 200 ವರ್ಷ ಹಳೆಯ ಐತಿಹಾಸಿಕ 'ಸ್ಟ್ರಾನ್‌ಕ್ಯಾಲಿ ಕೋಟೆ' ಹಾಗೂ ಅದರ 440 ಎಕರೆ ವಿಸ್ತೀರ್ಣದ ಎಸ್ಟೇಟ್ ಖರೀದಿಸಿದ್ದಾರೆ. 


ಮೈಕಲ್ ಮತ್ತು ಜಿಯಾನ್‌ಕಾರ್ಲಾ ಅಲೆನ್-ಬಕ್ಲಿ ದಂಪತಿಯಿಂದ ಈ ಆಸ್ತಿಯನ್ನು ಖರೀದಿಸಿದ್ದಾರೆ.

ಇದರ ಅಂದಾಜು ಮೌಲ್ಯ 20 ರಿಂದ 30 ಮಿಲಿಯನ್ ಡಾಲರ್ (ಸುಮಾರು ₹160 ರಿಂದ ₹250 ಕೋಟಿ ರೂಪಾಯಿ) ಎಂದು ವರದಿಯಾಗಿದೆ.

ಇದು ಐರ್ಲೆಂಡ್‌ನ ಕೌಂಟಿ ವಾಟರ್‌ಫೋರ್ಡ್‌ನಲ್ಲಿದ್ದು, ಡಬ್ಲಿನ್‌ನಿಂದ ನೈರುತ್ಯಕ್ಕೆ 150 ಕಿ.ಮೀ ದೂರದಲ್ಲಿದೆ. ನದಿಯ ಹಿನ್ನೀರಿನ ತಟದಲ್ಲಿರುವ ಈ ಕೋಟೆಯ ಸುತ್ತಲೂ ಸುಂದರ ಹುಲ್ಲುಹಾಸುಗಳು ಮತ್ತು ಹಳೆಯ ವೃಕ್ಷಗಳಿವೆ.

ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿತವಾದ ಈ 3 ಅಂತಸ್ತಿನ ಕೋಟೆಯಲ್ಲಿ 11 ಕೊಠಡಿಗಳು, ವಿಶಾಲವಾದ ಕಾರಿಡಾರ್‌ಗಳು, ಗೋಥಿಕ್ ಶೈಲಿಯ ಕಿಟಕಿಗಳಿವೆ.

ಈ ಕೋಟೆಯನ್ನು 1827-1830ರ ಅವಧಿಯಲ್ಲಿ ಕ್ಲೋನ್‌ಮೆಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಟೋರಿ ಸಂಸದ ಜಾನ್ ಕೈಲಿ ಅವರಿಗಾಗಿ ನಿರ್ಮಿಸಲಾಗಿತ್ತು. ಅತ್ಯಂತ ಆಕರ್ಷಕವಾಗಿ ಕಾಣುವ ಈ ಕೋಟೆಗೆ ಭೀಕರ ಹತ್ಯೆಯ ಕಥೆಯೂ ತಳುಕುಹಾಕಿಕೊಂಡಿದೆ.

ಈ ಕೋಟೆ ಇರುವ ಜಾಗದಲ್ಲಿ ಹಿಂದೆ ಜನರನ್ನು ಸೆರೆಹಿಡಿದು ಹತ್ಯೆ ಮಾಡಲಾಗುತ್ತಿತ್ತು ಎಂಬ ಉಲ್ಲೇಖವಿದೆ. ಲೇಖಕ ವಿಲಿಯಮ್ ಹಾವಿಟ್ ತಮ್ಮ 'ಹೋಮ್ಸ್ ಆಯಂಡ್ ಹಂಟ್ಸ್‌ ಆಫ್‌ ದಿ ಮೋಸ್ಟ್ ಎಮಿನೆಂಟ್ ಬ್ರಿಟಿಷ್ ಪೋಯೆಟ್ಸ್‌' ಪುಸ್ತಕದಲ್ಲೂ ಈ ರಹಸ್ಯ ಕಥೆಯನ್ನು ಉಲ್ಲೇಖಿಸಿದ್ದಾರೆ.

ಕೋಟೆ ಹಸ್ತಾಂತರದ ಬಗ್ಗೆ ಮಾಹಿತಿ ನೀಡಿರುವ ಬಕ್ಲಿ ಕುಟುಂಬದ ವಕ್ತಾರ, 'ನಾವು ಕಳೆದ 25 ವರ್ಷಗಳಿಂದ ಪ್ರೀತಿಯಿಂದ ಜತನವಾಗಿ ನೋಡಿಕೊಂಡಿದ್ದ ಈ ಮನೆಯನ್ನು ಬಿಟ್ಟು ಹೊರಡುತ್ತಿದ್ದೇವೆ. ಮಾರ್ಕ್ ಜುಕರ್‌ಬರ್ಗ್ ಕುಟುಂಬವು ಈ ಆಸ್ತಿ ಮತ್ತು ಅದರ ಪರಿಸರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮುನ್ನಡೆಸಲಿದೆ ಎಂಬ ಭರವಸೆ ನಮಗಿದೆ. ಈ ಅದ್ಭುತ ತಾಣದಲ್ಲಿ ಅವರ ಕುಟುಂಬಕ್ಕೆ ಅಪಾರ ಸಂತೋಷ ಸಿಗಲಿ' ಎಂದು ಶುಭ ಹಾರೈಸಿದ್ದಾರೆ.

ಆಧಾರ: ಮನಿ ಕಂಟ್ರೋಲ್, ಫಸ್ಟ್‌ಪೋಸ್ಟ್


Meta founder Mark Zuckerberg and his wife, Priscilla Chan, have purchased the historic 19th-century Strancally Castle in southeastern Ireland. Built around 1830 on the banks of the River Blackwater, Strancally Castle...











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries