ಕಾಸರಗೋಡು: ನಗರದ ಕೂಡ್ಲು ಪಾಯಿಚ್ಚಾಲಿನಲ್ಲಿ ಕಳೆದ ಮೂರು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶ್ರೀಸ್ಕಂದ ಯಕ್ಷಗಾನ ಕೇಂದ್ರದ ನೇತೃತ್ವದಲ್ಲಿಯಕ್ಷಗಾನ ನಾಟ್ಯ ತರಗತಿಯ ಎರಡನೇ ತಂಡಕ್ಕಿರುವ ತರಬೇತಿ ಆ. 23 ರಂದು ಆರಂಭಗೊಳ್ಳಲಿದೆ.
ಖ್ಯಾತ ಯಕ್ಷಗಾನ ಕಲಾವಿದ ಪಾವಂಜೆ ಮೇಳದ ವೇಷದಾರಿ ರಂಜಿತ್ ಗೋಳಿಯಡ್ಕ ಇವರು ನಾಟ್ಯಗುರು ಗಳಾಗಿದ್ದು, ಪ್ರತೀ ಭಾನುವಾರ ಬೆಳಗ್ಗೆ 10ಕ್ಕೆ ಶೇಷವನ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಮಯೂರ ಮಂಟಪದಲ್ಲಿ ಯಕ್ಷಗಾನ ತರಗತಿ ನಡೆಯಲಿದೆ. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಕೊಂಡ ಸಂಸ್ಥೆ ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಮೂಲಕ ಯಕ್ಷಗಾನ ತರಬೇತಿ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ಹಿರಿಯಚೆಂಡೆಮದ್ದಳೆ ಗುರು ಪದ್ಮನಾಭ ಉಪಾದ್ಯಾಯ ಇವರಿಂದ ಹಿಮ್ಮೇಳ ತರಗತಿಯೂ ನಡೆಯಲಿದೆ. ಯಕ್ಷಗಾನ ನಾಟ್ಯ ಅಭ್ಯಾಸ ಮಾಡಲಿಚ್ಚಿಸುವವರು ಕೇಂದ್ರದ ಅಧ್ಯಕ್ಷರಾದ ಕಿರಣ್ ಪ್ರಸಾದ್ ಕೂಡ್ಲು (9846588952) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

