HEALTH TIPS

ಅರುಣಾಚಲದ 27 ಪ್ರಮುಖ ಸ್ಥಳಗಳನ್ನು ನಕ್ಷೆಯಲ್ಲಿ ಗುರುತಿಸಿದ ಭಾರತ

ನವದೆಹಲಿ: ಗಡಿ ರಾಜ್ಯ ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ಚೀನಾ ಪದೇ ಪದೇ ಪ್ರಯತ್ನಿಸುತ್ತಿರುವ ನಡುವೆಯೇ, ಭಾರತವು ಶುಕ್ರವಾರ 'ಸರ್ವೆ ಆಫ್ ಇಂಡಿಯಾ'ದ ಅಧಿಕೃತ ನಕ್ಷೆಯಲ್ಲಿ ಅಲ್ಲಿನ 27 ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳನ್ನು ಅಧಿಕೃತವಾಗಿ ಗುರುತಿಸಿದೆ.


ಅರುಣಾಚಲ ಪ್ರದೇಶದ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಈ ಸ್ಥಳಗಳನ್ನು ನಿಖರವಾಗಿ ಗುರುತಿಸುವುದು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

'ಭಾರತ ಸರ್ಕಾರವು ಅರುಣಾಚಲ ಪ್ರದೇಶ ಸರ್ಕಾರದೊಂದಿಗೆ ಸಮಾಲೋಚಿಸಿದ್ದು, 'ಸರ್ವೆ ಆಫ್ ಇಂಡಿಯಾ'ದ ಅಧಿಕೃತ ನಕ್ಷೆಯಲ್ಲಿ ಅಲ್ಲಿನ ಒಟ್ಟು ಇಪ್ಪತ್ತೇಳು ಸ್ಥಳಗಳು ಅಥವಾ ಭೌಗೋಳಿಕ ವೈಶಿಷ್ಟ್ಯಗಳನ್ನು ಅವುಗಳ ಪ್ರಮಾಣಿತ ಹೆಸರುಗಳೊಂದಿಗೆ ಗುರುತಿಸಿದೆ'ಎಂದು ಗೃಹ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.

ಅರುಣಾಚಲ ಪ್ರದೇಶವನ್ನು ಚೀನಾ 'ಜಾಂಗ್‌ನಾನ್' ಎಂದು ಕರೆಯುತ್ತದೆ. ಈ ಪ್ರದೇಶದ ಸ್ಥಳಗಳಿಗೆ ಸಂಬಂಧಿಸಿದಂತೆ, 'ಪ್ರಮಾಣೀಕೃತ ಹೆಸರುಗಳು' ಎಂದು ಕರೆಯಲ್ಪಡುವ ಪಟ್ಟಿಗಳನ್ನು ಚೀನಾ ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಅರುಣಾಚಲ ಪ್ರದೇಶ ರಾಜ್ಯದ ಮೇಲಿನ ಭಾರತದ ಸಾರ್ವಭೌಮತ್ವದ ಮೇಲೆ ಇಂತಹ ಕ್ರಮಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಾದಿಸಿರುವ ಭಾರತವು ಚೀನಾದ ವಾದವನ್ನು ತಳ್ಳಿಹಾಕುತ್ತಾ ಬಂದಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries