HEALTH TIPS

300 ಅಡಿ ಕುಸಿದಿದ್ದ AI ವಿಮಾನ: ಪೈಲಟ್ ಡ್ರಗ್ಸ್ ತೆಗೆದುಕೊಂಡಿರುವುದು ದೃಢ; ವರದಿ

ನವದೆಹಲಿ: ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ದಿಢೀರನೆ ಅಂದಾಜು 300 ಅಡಿಗಳಷ್ಟು ಕುಸಿದ ಪರಿಣಾಮ 17 ಜನರಿಗೆ ಗಾಯಗಳಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. 


ವಿಮಾನವನ್ನು ಚಲಾಯಿಸುತ್ತದ್ದ ಪೈಲಟ್ ಮಾದಕ ದ್ರವ್ಯ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಆತ ಗಾಂಜಾ ಸೇವಿಸಿರುವ ಬಗ್ಗೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಎಐ2379 ವಿಮಾನವು ಟರ್ಬುಲೆನ್ಸ್‌ಗೆ ಸಿಲುಕಿ ದಿಢೀರನೆ 300 ಅಡಿ ಕುಸಿದಿತ್ತು. ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದರು. 137 ಮಂದಿ ಪ್ರಯಾಣಿಕರು ಮತ್ತು 8 ಮಂದಿ ಸಿಬ್ಬಂದಿ ಇದ್ದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಯಿತಾದರೂ ಘಟನೆ ಕುರಿತ ಅನುಮಾನಗಳು ಹಾಗೆಯೇ ಉಳಿದಿದ್ದವು.

ವಿಮಾನದ ಇಬ್ಬರೂ ಪೈಲಟ್‌ಗಳು ಮನೋವಿಕಾರಕ ವಸ್ತುಗಳ(psychoactive substances)ಸೇವನೆ ಕುರಿತಾದ ಪರೀಕ್ಷೆಗೆ ಒಳಗಾಗಿದ್ದರು.

'ಮುಖ್ಯ ಪೈಲಟ್ ಅವರ ತಪಾಸಣಾ ಫಲಿತಾಂಶವು ಹೆಚ್ಚಿನ ದೃಢೀಕರಣ ಪರೀಕ್ಷೆಯ ಅಗತ್ಯವನ್ನು ಸೂಚಿಸಿದೆ. ಅದರಂತೆ, ದೃಢೀಕರಣ ವಿಶ್ಲೇಷಣೆಗಾಗಿ ಮಾದರಿಗಳನ್ನು ನಿಗದಿತ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಂತಿಮ ವರದಿಯನ್ನು ನಿರೀಕ್ಷಿಸಲಾಗುತ್ತಿದೆ'ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಆಗಸ್ಟ್ 9ರಂದು ನೀಡಿದ ಹೇಳಿಕೆಯಲ್ಲಿ ತಿಳಿಸಿತ್ತು.

ಪೈಲಟ್ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಈ ಕುರಿತ ತನಿಖೆ ಮತ್ತು ತಪಾಸಣೆಯ ಅಂತಿಮ ವರದಿ ಬರಬೇಕಿರುವುದರಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು(ಡಿಜಿಸಿಎ) ಇಬ್ಬರು ಪೈಲಟ್‌ಗಳಿಗೆ ವಿಮಾನ ಚಾಲನೆ ಮಾಡದಂತೆ ನಿರ್ಬಂಧ ಹೇರಿದೆ. 

✈️Air India Flight AI2379 from Phuket to Delhi encountered severe turbulence on Tuesday after the aircraft experienced a sudden 300-foot loss of altitude during cruise. ⚠️ The Airbus A320neo was carrying 137 passengers and eight crew members when the unexpected altitude Show more






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries