HEALTH TIPS

ಜಮ್ಮು ಮತ್ತು ಕಾಶ್ಮೀರ: 8 ಮಂದಿ ಶಂಕಿತ ಉಗ್ರರ ಬಂಧನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 8 ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.


ಖಚಿತ ಮಾಹಿತಿ ಮೇರೆಗೆ ಶೋ‍‍ಪಿಯಾನ್‌ ಜಿಲ್ಲೆಯ ಇಮಾಮ್‌ ಸಾಹಿಬ್‌ನಲ್ಲಿರುವ ಸೇಬಿನ ತೋಟದ ಮೇಲೆ ದಾಳಿ ನಡೆಸಿದ್ದರು.

ಶೋಧ ಕಾರ್ಯಾಚರಣೆ ವೇಳೆ ಒಂದು ಗ್ರೆನೇಡ್‌, ಎರಡು ಮ್ಯಾಗಜಿನ್‌, ನಾಲ್ಕು ಮೊಬೈಲ್‌ ಫೋನ್‌, ನಿಷೇಧಿತ ಸಂಘಟನೆಯ ಪೋಸ್ಟರ್‌ಗಳು ಸಿಕ್ಕಿವೆ.

ಬಂಧಿತರನ್ನು ಆಶೀಕ್‌ ಹುಸೈನ್‌ ಕುಮಾರ್‌, ಆರೀಫ್‌ ಕುಮಾರ್‌ ಹಾಗೂ ಹ್ಯಾರಿಸ್‌ ಮನ್ಸೂರ್‌ ಎಂದು ಗುರುತಿಸಲಾಗಿದೆ.

ಶೋಪಿಯಾನ್‌ನಲ್ಲಿ ಮೋಟಾರ್‌ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ವೇಳೆ ಎರಡು ಹ್ಯಾಂಡ್‌ ಗ್ರೆನೇಡ್‌, ಹಿಜ್ಬುಲ್‌ ಮುಜಾಹಿದ್ದೀನ್‌ಗೆ ಸೇರಿದ ಕರಪತ್ರಗಳು ಸಿಕ್ಕಿವೆ.

ಬಂಧಿತರನ್ನು ಜುನೈದ್‌ ಅಹಮ್ಮದ್‌ ಧರ್‌, ಅಮೀರ್‌ ಯೂಸೂಫ್‌ ಹಾಗೂ ಜುನೈದ್‌ ಮುಜಾಫರ್‌ ಎಂದು ಗುರುತಿಸಲಾಗಿದೆ.

ಪುಲ್ವಾಮಾ ಅರಣ್ಯ ಪ್ರದೇಶದಲ್ಲಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಲತೀಫ್‌ ಅಹಮ್ಮದ್‌ ಹಾಗೂ ಏಜಾಜ್‌ ಅಹ್ಮದ್‌ನನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries