HEALTH TIPS

ಯುಪಿಐಗೆ 10 ವರ್ಷ: ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆ

ನವದೆಹಲಿ: ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಪ್ರಾರಂಭವಾದಾಗ ಪಿ. ಚಿದಂಬರಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದರು. ಪ್ರಸ್ತುತ ದಿನದಲ್ಲಿ ಯುಪಿಐ ಜಗತ್ತಿನ ಅತಿ ದೊಡ್ಡ ರಿಯಲ್-ಟೈಮ್ ಪಾವತಿ ವ್ಯವಸ್ಥೆಯಾಗಿ ಬೆಳೆದು ನಿಂತಿದೆ' ಬಿಜೆಪಿ ಹೇಳಿದೆ.

2016ರ ಆಗಸ್ಟ್‌ 25ರಂದು ಯುಪಿಐ ಸೇವೆಯನ್ನು ಆರಂಭಿಸಿತ್ತು. 


ಯುಪಿಐ ಬಂದು ಯಶಸ್ವಿಯಾಗಿ 10 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕರು ಪಿ. ಚಿದಂಬರಂ ಅವರ ಹಳೆಯ ಭಾಷಣದ ವಿಡಿಯೊವನ್ನು ಹಂಚಿಕೊಂಡು ಟೀಕೆ ಮಾಡಿದ್ದಾರೆ.

'ಡಿಜಿಟಲ್ ಪಾವತಿ ಕುರಿತು ಪಿ. ಚಿದಂಬರಂ ಅವರು ಅಂದು 'ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಆಗಲಿದೆ. ಗ್ರಾಮೀಣ ಪ್ರದೇಶದ ಜನರು ಯುಪಿಐ ಬಳಸಲು ಸಾಧ್ಯವಾಗುವುದಿಲ್ಲ' ಎಂದು ಟೀಕಿಸಿದ್ದರು. ಇಂದು ದೇಶದ ಪ್ರತಿಯೊಬ್ಬರು ಯುಪಿಐ ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.

ಯುಪಿಐ ಕುರಿತು ಅಣಕಿಸಿದ್ದ ಕಾಂಗ್ರೆಸ್ ನಾಯಕರಿಗಿಂತ, ಇಂದು ಬೀದಿಬದಿಯ ತರಕಾರಿ ವ್ಯಾಪಾರಿಗಳು, ಗೋಲಗಪ್ಪ ಮಾರುವ ವ್ಯಾಪಾರಿಗಳೇ ಹೆಚ್ಚು ಬುದ್ಧಿವಂತರು ಇದ್ದಾರೆ. ಇವರಿಂದ ರಾಹುಲ್ ಗಾಂಧಿ ಸೇರಿ ಅನೇಕರು ಬುದ್ಧಿ ಕಲಿಯಬೇಕು ಎಂದು ಸಂಬಿತ್ ವ್ಯಂಗ್ಯ ಮಾಡಿದ್ದಾರೆ.

ಪಿ. ಚಿದಂಬರಂ ಅವರ ಭಾಷಣದ ಹಳೆಯ ವಿಡಿಯೊವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡು,' ಯುಪಿಐ 10 ವರ್ಷ ಯಶಸ್ವಿಯಾಗಿ ಪೂರೈಸಿದೆ. ಅಂದು ಕಾಂಗ್ರೆಸ್ ನಾಯಕರು ಹೇಳಿದ್ದ ಹೇಳಿಕೆಗಳು ತಪ್ಪೆಂದು ಸಾಬೀತಾಗಿದೆ' ಎಂದಿದ್ದಾರೆ.

ಬಿಜೆಪಿ ಟೀಕೆಗೆ ತಿರುಗೇಟು ನೀಡಿರುವ ಸಂಸದ ಪವನ್ ಖೇರಾ ಅವರು, 'ಯುಪಿಐ ಜಾರಿಯಾಗಿ 10 ವರ್ಷ ಪೂರೈಸಿದೆ ಎಂದು ಸಂಭ್ರಮಿಸುವವರು ಇದರ ಅಡಿಪಾಯ ಹಾಕಿದವರು ಮನಮೋಹನ್ ಸಿಂಗ್ ಎಂಬುವುದನ್ನು ಮರೆಯಬಾರದು' ಎಂದಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries