HEALTH TIPS

ಬಡಾಜೆಯಲ್ಲಿ ಕೆಸರು ಗದ್ದೆ ಕಾರ್ಯಕ್ರಮ: ನಾಡಿನ ಶ್ರೀಮಂತ ಕೃಷಿ ಸಂಸ್ಕøತಿಯನ್ನು ಮರಳಿ ತರಬೇಕು-ಸೈಪುಲ್ಲ ತಂಙಳ್

ಮಂಜೇಶ್ವರ: ನಮ್ಮ ನಾಡಿನ ಶ್ರೀಮಂತವಾಗಿದ್ದ ಕೃಷಿ ಸಂಸ್ಕೃತಿಯನ್ನು ಮರಳಿ ತರಬೇಕೆಂದು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಯು.ಕೆ. ಸೈಪುÅಲ್ಲ ತಂಙಳ್ ಹೇಳಿದರು. 


ಕೃಷಿ ಕ್ಷೇತ್ರದ ಪುನರುಜ್ಜೀವನವನ್ನು ಗುರಿಯಾಗಿಸಿಕೊಂಡು ಮಂಜೇಶ್ವರ ಗ್ರಾಮ ಪಂಚಾಯತಿ ಮತ್ತು ಕುಟುಂಬಶ್ರೀ ಮಂಜೇಶ್ವರ ಸಿಡಿಎಸ್ ಸಂಯುಕ್ತವಾಗಿ ಆಯೋಜಿಸಿದ್ದ 'ಕೆಸರು ಗದ್ದೆ' ಕಾರ್ಯಕ್ರಮವನ್ನು ಮಂಜೇಶ್ವರ ಬಡಾಜೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದ ಕೃಷಿ ಸಂಸ್ಕೃತಿಯನ್ನು ಹೊಸ ಕಾಲದ ತಂತ್ರಜ್ಞಾನದ ಸಹಕಾರದೊಂದಿಗೆ ಮರಳಿ ತರಲು ಯುವಜನರ ಸಕ್ರಿಯ ಭಾಗವಹಿಸುವಿಕೆ ಅಗತ್ಯವಿದೆ ಎಂದು ಅವರು ಹೇಳಿದರು. ನಮ್ಮಲ್ಲಿ ಹೆಚ್ಚುತ್ತಿರುವ ಅನೇಕ ಜೀವನಶೈಲಿ ರೋಗಗಳು ಕೃಷಿ ಸಂಸ್ಕೃತಿಯಿಂದ ದೂರ ಸರಿದಿರುವುದರ ಪರಿಣಾಮಗಳಾಗಿವೆ ಎಂದು ಅವರು ನೆನಪಿಸಿದರು.

ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಹರ್ಷಾದ್ ವರ್ಕಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಹರಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಸರೀನಾ ಬಾನು, ಸದಸ್ಯರಾದ ಸಾದಿಕ್, ಸಫಾ ಫಾರೂಕ್, ಇಲ್ಯಾಸ್ ತೂಮಿನಾಡ್, ಆಶಾಲತಾ, ಅಬ್ದುಲ್ಲಾ ಗುಡ್ಡಕೇರಿ, ಬೇಬಿಲತಾ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾವ ಹಾಜಿ, ಮಾಜಿ ಸದಸ್ಯರಾದ ಯಾದವ ಬಡಾಜೆ, ಮಂಜೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರನ್, ಕುಟುಂಬಶ್ರೀ ಜಿಲ್ಲಾ ಎಡಿಎಂಎಸ್ ಹರಿದಾಸ್ ಹಾಗೂ ಯತೀಶ್ ಕಾಜೂರ್ ಉಪಸ್ಥಿತರಿದ್ದರು. ಸಿಡಿಎಸ್ ಅಧ್ಯಕ್ಷೆ ಜಯಂತಿ ಸ್ವಾಗತಿಸಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಅನೀಸ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries