ಸಮರಸ ಚಿತ್ರಸುದ್ದಿ: ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನಕ್ಕೆ ಇ-ಕಾಣಿಕೆ ಹುಂಡಿಯನ್ನು ಕೇರಳ ಗ್ರಾಮೀಣ ಬ್ಯಾಂಕ್, ಪೆರ್ಲ ಶಾಖೆಯವರು ಉದಾರವಾಗಿ ನೀಡಿದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವೈ.ವಿ.ಸುಬ್ರಹ್ಮಣ್ಯ ಅವರು ಶಾಖಾ ಪ್ರಬಂಧಕರಿಂದ ಸ್ವೀಕರಿಸಿದರು. ಮೊಕ್ತೇಸರರಾದ ಚಂದ್ರಶೇಖರ ಏತಡ್ಕ, ಪ್ರಬಂಧಕರು ಮತ್ತು ಸಿಬ್ಬಂದಿಗಳನ್ನು ಸ್ವಾಗತಿಸಿ ವಂದಿಸಿದರು. ಭಗವದ್ಭಕ್ತರು ಪಾಲ್ಗೊಂಡಿದ್ದರು.

.jpg)
