ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಕುಲಪತಿ ಪೆÇ್ರ. ಸಿಧು ಪಿ. ಅಲ್ಗೂರ್ ಧ್ವಜಾರೋಹಣ ನಡೆಸಿ, ವಿಶ್ವ ವಿದ್ಯಾಳಯ ಭದ್ರತಾ ವಿಭಾಗದ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸ್ವಾತಂತ್ರ್ಯ ಕೇವಲ ಅಮೂಲ್ಯವಾದ ಪರಂಪರೆಯಲ್ಲ, ಬದಲಾಗಿ ಅದೊಂದು ಜವಾಬ್ದಾರಿಯಾಗಿದೆ. ಜ್ಞಾನ, ನಾವೀನ್ಯತೆ, ಸಹಾನುಭೂತಿ ಮತ್ತು ಸೇವೆಯ ಆಧಾರದ ಮೇಲೆ ಕಟ್ಟಲಾದ ಭವಿಷ್ಯದ ಮೂಲಕ ಒಂದು ರಾಷ್ಟ್ರದ ಶ್ರೇಷ್ಠತೆಯನ್ನು ಅಳೆಯಲಾಗುತ್ತದೆ. ಭವಿಷ್ಯದ ಭಾರತವನ್ನು ನಿರ್ಮಿಸುವಲ್ಲಿ ಸ್ವಾತಂತ್ರ್ಯ ಹೋರಾಟಗಾರರು ತೋರಿದ ಅಸಾಧಾರಣ ಧೈರ್ಯ ಮತ್ತು ತ್ಯಾಗ ನಮ್ಮ ಜೀವನಕ್ಕೆ ಸ್ಫೂರ್ತಿಯ ಮೂಲವಾಗಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಭಾರತವು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದು, ಈ ಗುರಿಯನ್ನು ಸಾಧಿಸಲು ಎಲ್ಲರ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭ ಕಾಸರಗೋಡಿನ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು ಬ್ಯಾಂಡ್ ಪ್ರದರ್ಶನವನ್ನು ನೀಡಿದರು. ಪ್ರಭಾರ ಕುಲಸಚಿವ ಪೆÇ್ರ. ವಿ.ಬಿ. ಸಮೀರ್ ಕುಮಾರ್, ಪರೀಕ್ಷಾ ನಿಯಂತ್ರಕ ಡಾ. ಆರ್. ಜಯಪ್ರಕಾಶ್, ಪ್ರಭಾರ ಹಣಕಾಸು ಅಧಿಕಾರಿ ಡಾ. ಮಿನಿಮೋಲ್ ಎಂ.ಸಿ., ಡೀನ್ (ಶೈಕ್ಷಣಿಕ) ಪೆÇ್ರ. ಜೋಸೆಫ್ ಕೊಯಿಪ್ಪಳ್ಳಿ, ಡೀನ್ (ವಿದ್ಯಾರ್ಥಿ ಕಲ್ಯಾಣ) ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ ಹಾಗೂ ಇತರ ಡೀನ್‍ಗಳು, ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಸಂದರ್ಭ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಯೋಗ ಪ್ರದರ್ಶನ ನಡೆಯಿತು.



