ಕಾಸರಗೋಡು: ನಿರಂತರ ಹೋರಾಟಗಳ ಮೂಲಕ ಗಳಿಸಿರುವ ಸ್ವಾತಂತ್ರ್ಯವನ್ನು ಸಂರಕ್ಷಿಸಿಕೊಂಡು ಬರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು ಎಂದು ಕೇರಳ ರಾಜ್ಯ ಸ್ಥಳೀಯಾಡಳಿತ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಾಜಿ ತಿಳಿಸಿದ್ದಾರೆ.
ಅವರು 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು.
ಅಹಿಂಸೆ ಎಂದರೆ ಕೇವಲ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವುದರಿಂದ ದೂರವಿರುವುದಷ್ಟೇ ಅಲ್ಲ, ಭಿನ್ನಾಭಿಪ್ರಾಯ ಹೊಂದಿರುವವರನ್ನು ಗೌರವಿಸುವುದೂ ಪ್ರಜಾಪ್ರಭುತ್ವದ ಭಾಗವೇ ಎಂದು ಮಹಾತ್ಮಾಗಾಂಧೀಜಿ ಅವರ ಹೇಳಿಕೆಯನ್ನು ಸ್ಮರಿಸಿದರು. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿಗೆ ಮಾದರಿಯಾಗಿದ್ದು, ದೇಶದ ಜನತೆಗೆ ಇದು ರಕ್ಷಾಕವಚವಾಗಿ ನೆಲೆನಿಂತಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಮತ್ತು ಜಿಲ್ಲಾ ಪೆÇಲೀಸ್ ಮುಖ್ಯಸ್ಥ ಪಿ. ನಿತಿನ್ ರಾಜ್ ಅವರೂ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಹಾಗೂ ಶಾಸಕ ಎ.ಕೆ.ಎಂ. ಅಶ್ರಫ್, ಕಲ್ಲಟ್ರ ಮಾಹಿನ್, ಕೆ.ನೀಲಕಂಠನ್, ಗೋವಿಂದನ್ ಪಳ್ಳಿಕ್ಕಾಪ್ಪಿಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಕೆ. ಸೋಯಾ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಕುಞÂ ಚೆರ್ಕಳ, ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಜಿಲ್ಲಾ ಪಂಚಾಯತ್ ಸದಸ್ಯ ಅಜೀಜ್ ಕಳತ್ತೂರು, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡ್, ಸದಸ್ಯ ಹನೀಫ್, ಹೆಚ್ಚುವರಿಜಿಲ್ಲಾ ದಂಡಾಧಿಕಾರಿ(ಎಡಿಎಂ) ಪಿ.ಉದಯಕುಮಾರ್, ಎಎಸ್ಪಿ ಅಚ್ಯುತ್ ಅಶೋಕ್, ಕಾಸರಗೋಡು ಆರ್‍ಡಿಒ ಎಂ.ಎಸ್. ವಿಜು ಕುಮಾರ್, ಡಿವೈಎಸ್‍ಪಿಗಳು, ಸಹಾಯಕ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಇದೇ ಸಂದರ್ಭ ಸಶಸ್ತ್ರ ಪಡೆಗಳ ಧ್ವಜ ದಿನದ ಸಂದರ್ಭದಲ್ಲಿ ಅಂಚೆಚೀಟಿಗಳನ್ನು ವಿತರಿಸುವ ಮೂಲಕ ಅತಿ ಹೆಚ್ಚು ಫಂಡ್ ಸಂಗ್ರಹಿಸಿದ ಕಾಸರಗೋಡು ಸರ್ಕಾರಿ ಕಾಲೇಜು, ಶಿಕ್ಷಣೇತರ ಸಂಸ್ಥೆ ಕಾಸರಗೋಡು ಜಿಲ್ಲಾ ರಿಜಿಸ್ಟಾರ್, ಸೀನಿಯರ್ ಡಿವಿಷನ್ ಎನ್.ಸಿ.ಸಿ ಯುನಿಟ್ ಆದ ಪಡನ್ನಕ್ಕಾಡ್ ನೆಹರು ಆಟ್ರ್ಸ್ ಆಂಡ್ ಸೈನ್ಸ್ ಕಾಲೇಜು ಮತ್ತು ಜೂನಿಯರ್ ಡಿವಿಷನ್ ಎನ್.ಸಿ.ಸಿ ಯೂನಿಟ್ ಆದ ಪರಪ್ಪ ಜಿ.ಎಚ್.ಎಸ್ ಪ್ರತಿನಿಧಿಗಳಿಗೆ ಸಚಿವರು ರೋಲಿಂಗ್ ಟ್ರೋಫಿ ವಿತರಿಸಿದರು
ಸ್ಥಳೀಯ ಪೊಲೀಸ್, ಮಹಿಳಾ ಪೊಲೀಸ್, ಅಬಕಾರಿ ದಳ, ಎನ್‍ಸಿಸಿ, ಸ್ಟೂಡೆಂಟ್ ಪೊಲೀಸ್, ವಿದ್ಯಾರ್ಥಿಗಳ ಬ್ಯಾಂಡ್ ಮೇಳಗಳು ಪಥ ಸಂಚಲನಕ್ಕೆ ಮೆರಗುನೀಡಿತು.



