HEALTH TIPS

ಇರಾನ್‌ ಬೆದರಿಕೆ: ಕೊನೆಯ ಕ್ಷಣದಲ್ಲಿ ವಿಮಾನ ಬದಲಾಯಿಸಿದ ಟ್ರಂಪ್‌

ವಾಷಿಂಗ್ಟನ್‌: 'ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿದೇಶಕ್ಕೆ ಪ್ರವಾಸ ಮಾಡುವ ವೇಳೆ 'ಏರ್‌ಫೋರ್ಸ್‌ ಒನ್‌' ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಆದರೆ, ಕಳೆದ ತಿಂಗಳು ಟರ್ಕಿಯ ಅಂಕಾರದಲ್ಲಿ ನಡೆದ ನ್ಯಾಟೊ ಶೃಂಗಸಭೆಯ ಬಳಿಕ ಬೇರೆ ವಿಮಾನದ ಮೂಲಕ ಶ್ವೇತಭವನಕ್ಕೆ ಹಿಂತಿರುಗಿದ್ದರು' ಎಂದು 'ವಾಷಿಂಗ್ಟನ್‌ ಪೋಸ್ಟ್‌' ಪತ್ರಿಕೆಯಲ್ಲಿ ಸೋಮವಾರ ಪ್ರಕಟಗೊಂಡ ವರದಿಯಲ್ಲಿ ತಿಳಿಸಲಾಗಿದೆ. 


ಟ್ರಂಪ್‌ ಹಾಗೂ ಅವರ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುವುದಾಗಿ ಇರಾನ್‌ ಬೆದರಿಕೆ ಹಾಕಿದ್ದೇ ಈ ನಿರ್ಧಾರ ಕೈಗೊಳ್ಳಲು ಕಾರಣ ಎಂದು ವರದಿ ತಿಳಿಸಿದೆ.

ಶೃಂಗಸಭೆಗೆ ತೆರಳಲು ಕತಾರ್‌ ನೀಡಿದ 'ಏರ್‌ಫೋರ್ಸ್‌-ಒನ್‌' ವಿಮಾನದಲ್ಲಿಯೇ ಪ್ರಯಾಣಿಸಿದ್ದರು. ಹಿಂತಿರುಗುವ ವೇಳೆ, ಪೂರ್ವ ಇಂಗ್ಲೆಂಡ್‌ನಲ್ಲಿರುವ ಅಮೆರಿಕದ ಪಡೆಗಳ ಪರಿಶೀಲನೆಗಾಗಿ ಹೊಸ 'ಏರ್‌ಫೋರ್ಸ್‌ ಒನ್‌' ವಿಮಾನವು ಅಂಕಾರದಿಂದ ಮೊದಲು ತೆರಳಲಿದೆ ಎಂದು ಹೇಳಿಕೊಂಡಿದ್ದರು. ನಂತರ, ಹಳೆಯ 'ಏರ್‌ಫೋರ್ಸ್‌ ಒನ್‌' ವಿಮಾನ ಏರಿ ಟೆಲಿವಿಷನ್‌ ಕ್ಯಾಮೆರಾಗಳಿಗೆ ಫೋಸ್‌ ನೀಡಿದ್ದರು.

ನ್ಯಾಟೋ ದೇಶಗಳ ನಾಯಕರು ವಾರ್ಷಿಕ ಸಭೆ ಮುಗಿಸಿ ವಾಷಿಂಗ್ಟನ್‌ಗೆ ಹಿಂತಿರುಗುವ ವೇಳೆ ಪತ್ರಕರ್ತರು ಹಾಗೂ ಶ್ವೇತಭವನದ ಸಿಬ್ಬಂದಿ ಕೂಡ ವಿಮಾನ ಏರಿದ್ದರು. ಅಧ್ಯಕ್ಷ ಟ್ರಂಪ್‌ ಕೂಡ ತಾವು ಪ್ರಯಾಣಿಸುತ್ತಿರುವ ವಿಮಾನದಲ್ಲಿಯೇ ಪ್ರಯಾಣಿಸುತ್ತಿದ್ದಾರೆ ಎಂದು ನಂಬುವಂತೆ ಮಾಡಲಾಗಿತ್ತು.

ಆದರೆ, ಹಾರುವ ಮುನ್ನ ಕೆಲವೇ ನಿಮಿಷಗಳಿಗೂ ಮುನ್ನ ಅಧ್ಯಕ್ಷರು ಪ್ರಯಾಣಿಸುವ ವೇಳೆ ಆಹಾರ ಹಾಗೂ ಇತರೆ ವಸ್ತುಗಳನ್ನು ಕೊಂಡೊಯ್ಯಲು ಬಳಸುವ ಸಣ್ಣದಾದ 'ಏರ್‌ಫೋರ್ಸ್‌ ಸಿ-32ಎ' ವಿಮಾನವೇರಿ ಇಂಗ್ಲೆಂಡ್‌ನ ಮಿಲ್ಡೆನ್‌ಹಾಲ್‌ಗೆ ತೆರಳಿದರು ಎಂದು ವರದಿಯಲ್ಲಿ ತಿಳಿಸಿದೆ.

ಈ ಬಗ್ಗೆ ಅಮೆರಿಕದ ಸೀಕ್ರೆಟ್‌ ಸರ್ವಿಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರೊಂದಿಗೆ ಅಮೆರಿಕದ ಅಧ್ಯಕ್ಷರಿಗೆ ಕತಾರ್‌ನ ಸರ್ಕಾರವು ಉಡುಗೊರೆಯಾಗಿ ನೀಡಿದ ಹೊಸ 'ಏರ್‌ಫೋರ್ಸ್‌-1'ನ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳನ್ನು ಉಂಟು ಮಾಡಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries