HEALTH TIPS

ಸಿರಿಯಾದ ಮಾಜಿ ಅಧ್ಯಕ್ಷ ಬಶರ್ ಅಲ್ ಅಸಾದ್‌ಗೆ ಮರಣದಂಡನೆ

ಡಮಸ್ಕಸ್: ಸಿರಿಯಾದ ಮಾಜಿ ಅಧ್ಯಕ್ಷ ಬಶರ್ ಅಲ್ ಅಸಾದ್ ಹಾಗೂ ಅವರ ಕಿರಿಯ ಸಹೋದರನಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಸಿರಿಯಾದ ಮಾಜಿ ಅಧ್ಯಕ್ಷ ಬಶರ್ ಅಲ್ ಅಸಾದ್‌ಗೆ 14 ವರ್ಷಗಳ ಅಂತರ್ಯುದ್ಧದಲ್ಲಿ ನಡೆದ ಯುದ್ಧಾಪರಾಧಗಳಿಗಾಗಿ ಡಮಸ್ಕಸ್ ನ್ಯಾಯಾಲಯವು ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. 


ಸಿರಿಯಾದ ಮಾಜಿ ಅಧ್ಯಕ್ಷ ಬಶರ್ ಅಲ್ ಅಸಾದ್‌ಗೆ ಮರಣದಂಡನೆ

14 ವರ್ಷ ನಡೆದ ಸಿರಿಯಾ ಆಂತರ್ಯುದ್ಧದ ವೇಳೆ ಮಾನವತೆಯ ವಿರುದ್ಧದ ಅಪರಾಧಗಳು ಹಾಗೂ ಯುದ್ಧ ಅಪರಾಧದ ಆರೋಪದಲ್ಲಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಯುದ್ಧದಿಂದಾಗಿ 5 ಲಕ್ಷದಷ್ಟು ಜನ ಮೃತಪಟ್ಟಿದ್ದರು.

ಡಮಸ್ಕಸ್‌ನ ನಾಲ್ಕನೇ ಅಪರಾಧ ನ್ಯಾಯಾಲಯವು ಈ ತೀರ್ಪು ನೀಡಿದೆ. ಸುಮಾರು 50 ವರ್ಷಗಳು ಬಶರ್ ಅವರ ಕುಟುಂಬ ಸಿರಿಯಾವನ್ನು ಆಳ್ವಿಕೆ ನಡೆಸಿತ್ತು. 20 ತಿಂಗಳ ಹಿಂದಷ್ಟೇ ಬಶರ್ ಅಧಿಕಾರ ಕಳೆದುಕೊಂಡಿದ್ದರು.

'ದೇಶದ ಸಂಸ್ಥೆಗಳನ್ನು ಬಳಸಿ ಬಶರ್ ಯುದ್ಧಾಪರಾದ ಹಾಗೂ ಮಾನವತೆಯ ವಿರುದ್ಧ ಅಪರಾಧ ಎಸಗಿದ್ದಾರೆ' ಎಂದು ನ್ಯಾಯಾಧೀಶ ಫಕ್ರುದ್ದೀನ್ ಅಲ್-ಅರ್ಯನ್ ಅವರು ತೀರ್ಪಿನ ವೇಳೆ ಹೇಳಿದ್ದಾರೆ. ತೀರ್ಪು ಓದುವ ದೃಶ್ಯಗಳು ಸರ್ಕಾರಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು.

ಅಸಾದ್ ಅವರ ತಾಯಿಯ ಸೋದರ ಸಂಬಂಧಿ ಆತಿಫ್‌ ನಜೀಬ್‌ಗೂ ಮರಣದಂಡನೆ ವಿಧಿಸಲಾಗಿದೆ. ದಕ್ಷಿಣ ಪ್ರಾಂತ್ಯವಾದ ದರಾದಲ್ಲಿ ನಡೆದ ದಮನಕಾರಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ ಆರೋಪದಲ್ಲಿ ಅವರನ್ನು ದೋಷಿ ಎಂದು ಕೋರ್ಟ್ ಘೋಷಿಸಿದೆ. ಅವರ ಈ ಕಾರ್ಯಾಚರಣೆಯೇ ಬಳಿಕ ಬಂಡಾಯ ಮತ್ತು ಅಂತರ್ಯುದ್ಧಕ್ಕೆ ಕಾರಣವಾಗಿತ್ತು. ನಜೀಬ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ಅಲ್‌ ಅರ್ಯಾನ್‌ ತಿಳಿಸಿದ್ದಾರೆ.

ನ್ಯಾಯಾಧೀಶರು ತೀರ್ಪು ಓದುವ ವೇಳೆ, ಜೈಲಿನ ಸಮವಸ್ತ್ರ ಧರಿಸಿದ್ದ ನಜೀಬ್ ಕಟಕಟೆಯಲ್ಲಿ ನಿಂತಿದ್ದರು. ಭಾರಿ ಬಂದೋಬಸ್ತ್ ಕೂಡ ಇತ್ತು. ತೀರ್ಪಿನ ಬಗ್ಗೆ ತಿಳಿದುಕೊಳ್ಳಲು ಸಾವಿರಾರು ಮಂದಿ ಡಮಸ್ಕಸ್‌ನ ಹೃದಯ ಭಾಗದಲ್ಲಿರುವ ಕೋರ್ಟ್‌ನ ಹೊರಗಡೆ ಸೇರಿದ್ದರು.

2024ರಲ್ಲಿ ಅಧಿಕಾರ ಪತನಗೊಂಡ ಬಳಿಕ ಅಸಾದ್ ಹಾಗೂ ಅವರ ಸಹೋದರ ಮಹೆರ್ ರಷ್ಯಾಕ್ಕೆ ಪಲಾಯನ ಮಾಡಿ ಆಶ್ರಯ ಪಡೆದಿದ್ದಾರೆ. ಅವರನ್ನು ಒಪ್ಪಿಸಬೇಕು ಎಂದು ಸಿರಿಯಾದ ಹೊಸ ಆಡಳಿತಗಾರರು ರಷ್ಯಾವನ್ನು ಒತ್ತಾಯಿಸಿದ್ದಾರೆ.

ನಜೀಬ್‌ ಅವರು ಅಸಾದ್ ಆಡಳಿತದ ಉನ್ನತ ಶ್ರೇಣಿಯ ಭದ್ರತಾ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು. ಸೇನೆಯ ಮಾಜಿ ಬ್ರಿಗೇಡಿಯರ್‌ ಜನರಲ್‌ ಆಗಿದ್ದ ಅವರು, 2011ರಲ್ಲಿ ಅಸಾದ್‌ ಆಡಳಿತದ ಅವಧಿಯಲ್ಲಿ ದಕ್ಷಿಣ ಸಿರಿಯಾದ ದರಾದಲ್ಲಿ ರಾಜಕೀಯ ಭದ್ರತಾ ವಿಭಾಗದ ಮುಖ್ಯಸ್ಥರಾಗಿದ್ದರು.

ಆಧಾರ: ಎಪಿ, ರಾಯಿಟರ್ಸ್






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries