HEALTH TIPS

ಮಾಸ್ಕೊದಲ್ಲಿ ಲ್ಯಾಂಡ್ ಆದ ಅಮೆರಿಕದ ಮಿಲಿಟರಿ ವಿಮಾನ: ಮಾಹಿತಿ ಇಲ್ಲ ಎಂದ ರಷ್ಯಾ

ಮಾಸ್ಕೊ: ಅಮೆರಿಕ ವಾಯುಪಡೆಗೆ ಸೇರಿದ ವಿಮಾನವೊಂದು ಮಂಗಳವಾರ ರಷ್ಯಾದ ಮಾಸ್ಕೊದಲ್ಲಿರುವ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅದರ ಉದ್ದೇಶ ಅಥವಾ ಪ್ರಯಾಣದ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದು ರಷ್ಯಾ ಹೇಳಿದೆ. 


ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕ ನೋಂದಾಯಿತ ಈ ವಿಮಾನವು ಲಾಟ್ವಿಯಾದ ರಾಜಧಾನಿ ರಿಗಾದಿಂದ ಪ್ರಯಾಣ ಬೆಳೆಸಿ ಸ್ಥಳೀಯ ಕಾಲಮಾನ ಬೆಳಿಗ್ಗೆ ಸುಮಾರು 7 ಗಂಟೆಗೆ ಮಾಸ್ಕೊ ತಲುಪಿದೆ.

ಈ ಮಾಹಿತಿ ವಿಮಾನಗಳ ಸಂಚಾರದ ಮಾಹಿತಿ ನೀಡುವ 'ಫ್ಲೈಟ್‌ರಾಡಾರ್24' ದತ್ತಾಂಶದಿಂದ ತಿಳಿದುಬಂದಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ರಷ್ಯಾದ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೋವ್, ಅಮೆರಿಕ ಆಡಳಿತದ ಪ್ರತಿನಿಧಿಗಳೊಂದಿಗೆ ಈ ವಾರ ಯಾವುದೇ ಸಭೆ ನಡೆಸುವ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲಭ್ಯವಿರುವ ದತ್ತಾಂಶಗಳ ಪ್ರಕಾರ, ಈ ವಿಮಾನವು ಆಗಸ್ಟ್‌ 23ರಂದು ಅಮೆರಿಕದ ವಾಷಿಂಗ್ಟನ್ ಡಿ.ಸಿ. ಸಮೀಪದ ಕ್ಯಾಂಪ್ ಸ್ಪ್ರಿಂಗ್ಸ್ ವಾಯುನೆಲೆಯಿಂದ ಹೊರಟು ರಿಗಾ ತಲುಪಿತ್ತು. ಬಳಿಕ ಅಲ್ಲಿಂದ ಮಾಸ್ಕೊಗೆ ಪ್ರಯಾಣ ಮುಂದುವರಿಸಿದೆ.

ಉಕ್ರೇನ್‌ ಯುದ್ಧದ ವಿಷಯವಾಗಿ ಅಮೆರಿಕ-ರಷ್ಯಾ ನಡುವಿನ ಸಂಬಂಧಗಳು ತೀವ್ರ ಬಿಗಡಾಯಿಸಿದ್ದು, ಈ ಸಂದರ್ಭದಲ್ಲೇ ಅಮೆರಿಕದ ನೋಂದಾಯಿತ ಮಿಲಿಟರಿ ವಿಮಾನವೊಂದು ಯುರೋಪ್‌ನಿಂದ ನೇರವಾಗಿ ರಷ್ಯಾಕ್ಕೆ ಆಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.


An unusual visitor to Moscow this morning. 👀 A US Air Force C-17A Globemaster III flew from Riga to Moscow Vnukovo Airport flightradar24.com/data/aircraft/











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries