ಬೀಜಿಂಗ್ : ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಮಂಗಳವಾರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿ ಜೊತೆ ಮಾತುಕತೆ ನಡೆಸಿದ್ದಾರೆ.
ಸೆಪ್ಟೆಂಬರ್ 12, 13ರಂದು ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಭಾಗಿಯಾಗುವ ನಿರೀಕ್ಷೆ ಇದೆ.
ಈ ಹಿನ್ನೆಯಲ್ಲಿ ಭಾರತ- ಚೀನಾ ವಿಶೇಷ ಪ್ರತಿನಿಧಿಗಳಾಗಿ ಡೊಭಾಲ್ ಹಾಗೂ ವಾಂಗ್ ಯಿ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ.
3,488 ಕಿ.ಮೀ ಉದ್ದದ ಭಾರತ- ಚೀನಾ ಗಡಿ ವಿವಾದವನ್ನು ಸಂಪೂರ್ಣವಾಗಿ ಬಗೆಹರಿಸಲು ವಿಶೇಷ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಮಾತುಕತೆಗೂ ಮುನ್ನ ಅಜಿತ್ ದೋವಲ್ ಅವರು ಬೀಜಿಂಗ್ನಲ್ಲಿ ಚೀನಾದ ಉಪಾಧ್ಯಕ್ಷ ಹಾನ್ ಜಾಂಗ್ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಇನ್ನೂ ಈ ಸಭೆಯಲ್ಲಿ ಮಾತನಾಡಿರುವ ಹಾನ್ ಜಾಂಗ್, 'ಭಾರತ-ಚೀನಾ ಸಂಬಂಧವನ್ನು ದೀರ್ಘಕಾಲದವರೆಗೂ ಪಾಲಿಸಬೇಕು. ಎರಡೂ ದೇಶಗಳ ಒಪ್ಪಂದವನ್ನು ಜಾರಿಗೊಳಿಸಲು ಒಟ್ಟಾಗಿ ಕೆಲಸ ಮಾಡಬೇಕು. ಗಡಿ ಸಮಸ್ಯೆ ಸೇರಿ ಇತರೆ ಸಮಸ್ಯೆಗಳನ್ನು ಸಮನ್ವಯದಿಂದ ಬಗೆಹರಿಸಿಕೊಳ್ಳುವಂತೆ' ಸಲಹೆ ನೀಡಿದ್ದಾರೆ.

