ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 'ನಿರ್ಭಯಾ ನಿಧಿ' ಅಡಿಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯೊಂದನ್ನು ಆಯೋಜಿಸಿದೆ. ಒಥಿಉov ಸಹಯೋಗದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ದೇಶದ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ಹೊಸ ಆಲೋಚನೆ ಹಾಗೂ ಕಲ್ಪನೆಗಳಿಂದ ಕೂಡಿದ ಯೋಜನಾ ಪ್ರಸ್ತಾವನೆ ಸಲ್ಲಿಸಬಹುದು.
'ಅವಳಿಗಾಗಿ ನಾವೀನ್ಯತೆ - ಮಹಿಳಾ ಸುರಕ್ಷತೆಗಾಗಿ ಆಲೋಚನೆಗಳು' (Innovation for Her - Ideas for Women's Safety) ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಸುರಕ್ಷತೆ, ಸಮುದಾಯದ ಪಾಲ್ಗೊಳ್ಳುವಿಕೆ, ಮೂಲಸೌಕರ್ಯಗಳ ಸುಧಾರಣೆ ಹಾಗೂ ಕಾನೂನು ಮತ್ತು ಜಾಗೃತಿ ವಿಷಯಗಳನ್ನು ಆಧಾರವಾಗಿ ಇಟ್ಟುಕೊಂಡು ಹೊಸ ಕಲ್ಪನೆಗಳನ್ನು ಯೋಜಿತ ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು.
ಈ ಸ್ಪರ್ಧೆಯಲ್ಲಿ ಭಾರತದ ಎಲ್ಲಾ ನಾಗರಿಕರು, ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್‌ಗಳು, ಸಂಸ್ಥೆಗಳು ಹಾಗೂ ಸಂಘಟನೆಗಳು ಭಾಗವಹಿಸಬಹುದಾಗಿದೆ.
ಸೂಚನೆಗಳು
ಯೋಜನಾ ಪ್ರಸ್ತಾವನೆಯ ಗಾತ್ರ 2 ಎಂಬಿ ಮೀರಬಾರದು. ಇದು ಪಿಡಿಎಫ್ ಸ್ವರೂಪದಲ್ಲಿ ಇರುವುದು ಕಡ್ಡಾಯ
ಪ್ರಸ್ತಾವನೆಯು 4 ಪುಟಗಳನ್ನು ಮೀರುವಂತಿಲ್ಲ. 2000 ಪದಗಳಿಂದ ಕೂಡಿರಬೇಕು. (ಇದರೊಳಗೆ ಯೋಜನೆಗೆ ಸಂಬಂಧಿಸಿದ ರೇಖಾ ಚಿತ್ರಗಳು ಸೇರಿಸಬಹುದು)
ಸಲ್ಲಿಸುವ ಐಡಿಯಾಗಳು ಸ್ವಂತದ್ದಾಗಿರಬೇಕು. ಎಐ ಬಳಸಿಕೊಂಡು ರಚಿಸಿರಬಾರದು ಅಥವಾ ಕೃತಿಚೌರ್ಯ ಮಾಡಿರಬಾರದು.
ಸಿದ್ದಪಡಿಸಿದ ಯೋಜನಾ ಪ್ರಸ್ತಾವನೆಯನ್ನು MyGov.in ಜಾಲತಾಣದಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಯ ದಿನಾಂಕ
ಪ್ರಾರಂಭ ದಿನಾಂಕ 2026ರ ಆಗಸ್ಟ್ 21
ಕೊನೆಯ ದಿನಾಂಕ 2026ರ ಸೆಪ್ಟೆಂಬರ್ 16
ಬಹುಮಾನ
ಮೊದಲ ಸ್ಥಾನ ಪಡೆದವರಿಗೆ ₹20,000 ಬಹುಮಾನ
ದ್ವಿತೀಯ ಸ್ಥಾನ ಪಡೆದವರಿಗೆ ₹15,000 ಬಹುಮಾನ
3 ವಿಜೇತರಿಗೆ ತಲಾ ₹10,000 ಸಮಾಧಾನಕರ ಬಹುಮಾನ ಸಿಗಲಿದೆ.
ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲರಿಗೂ ಪ್ರಮಾಣ ಪತ್ರ ಸಿಗಲಿದೆ.
ನಿಯಮ ಮತ್ತು ಷರತ್ತುಗಳು
ಭಾರತೀಯ ಪ್ರಜೆಯಾಗಿರಬೇಕು.
ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ನವೀನ ಕಲ್ಪನೆ ಹಾಗೂ ಯೋಜನೆಗಳ ಪ್ರಸ್ತಾವನೆಯನ್ನು ಆಹ್ವಾನಿಸುವ ಉದ್ದೇಶವನ್ನು ಮಾತ್ರ ಹೊಂದಿದೆ.
ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕರಿಸುವ, ತಿರಸ್ಕರಿಸುವ, ಶಾರ್ಟ್‌ಲಿಸ್ಟ್ ಮಾಡಿ ಆಯ್ಕೆ ಮಾಡುವ ಸಂಪೂರ್ಣ ಅಧಿಕಾರ ಸಚಿವಾಲಯಕ್ಕಿದೆ.
ಸಚಿವಾಲಯದ ತೀರ್ಮಾನವೇ ಅಂತಿಮವಾಗಿರುತ್ತದೆ.
ಮಹಿಳೆಯರ ಸುರಕ್ಷತೆಯ ಕುರಿತು ಸಲ್ಲಿಸುವ ಹೊಸ ಕಲ್ಪನೆಗಳು ನಿಮ್ಮದೇ ಆಗಿರಬೇಕು.
ಒಮ್ಮೆ ಸಲ್ಲಿಸಿದ ಯೋಜನಾ ಪ್ರಸ್ತಾವನೆಯನ್ನು ಪ್ರಕಟಿಸುವ ಹಾಗೂ ಯಾವುದೇ ಸಂದರ್ಭದಲ್ಲಿ ಬಳಸಿಕೊಳ್ಳುವ ಹಕ್ಕನ್ನು ಸಚಿವಾಲಯ ಹೊಂದಿರುತ್ತದೆ.
ಈ ನಿಯಮಗಳು ಮತ್ತು ಷರತ್ತುಗಳು ಭಾರತೀಯ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ.
ಸ್ಪರ್ಧೆಯಿಂದ ಉಂಟಾಗುವ ಯಾವುದೇ ವಿವಾದವು ನವದೆಹಲಿಯ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

