HEALTH TIPS

"ಯಾರು ಏನು ಧರಿಸಬೇಕು ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯವಲ್ಲ": ಹಿಜಾಬ್ ಕುರಿತ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಬಿಜೆಪಿ ವಿರೋಧ

ನವದೆಹಲಿ:  ಶಾಲೆಯಲ್ಲಿ ಹಿಜಾಬ್ ಧರಿಸುವ ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಗ್ಗೆ ಬಿಜೆಪಿ ಟೀಕಿಸಿದ್ದು, ಯಾರು ಏನು ಧರಿಸಬೇಕು ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯಗಳ ಕೆಲಸವಲ್ಲ, ಈ ವಿಷಯವನ್ನು ಶಾಲಾ ಆಡಳಿತಕ್ಕೆ ಬಿಡಬೇಕು ಎಂದು ಬಿಜೆಪಿ ಹೇಳಿದೆ. 


ನ್ಯಾಯಾಲಯವು ಅಂತಹ ಆದೇಶಗಳನ್ನು ನೀಡಿದರೆ, ಅದು ಹಲವು ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದು ಪ್ರತಿ ಧರ್ಮದ ಮೇಲೆ ಪರಿಣಾಮ ಬೀರುವ ಮತ್ತಷ್ಟು ತೊಡಕುಗಳಿಗೆ ಕಾರಣವಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಇಸ್ಲಾಂ ಹೇಳಿದ್ದಾರೆ. ನಂಬಿಕೆ ಎಂಬುದು ಬಹಳ ದೊಡ್ಡ ವಿಚಾರ ಎಂದು ಅವರು ಪ್ರತಿಪಾದಿಸಿದರು.

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಆ.21ರಂದು ವಜಾಗೊಳಿಸಿದೆ. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಸಾಕಷ್ಟು ದಾಖಲೆ ಅಥವಾ ಪುರಾವೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ತೀರ್ಪಿನಲ್ಲಿ ನ್ಯಾಯಾಲಯ ಹೇಳಿತ್ತು.

ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಜಾಫರ್ ಇಸ್ಲಾಂ, ನೀವು ಒಂದು ಧರ್ಮವನ್ನು ಮಾತ್ರ ಪ್ರತ್ಯೇಕವಾಗಿ ಗುರಿಯಾಗಿಸಲು ಸಾಧ್ಯವಿಲ್ಲ. ಹಳ್ಳಿಗಳಲ್ಲಿಯೂ ಮಹಿಳೆಯರು ಪರ್ದಾ ಧರಿಸುತ್ತಾರೆ. ಇದು ನಮ್ಮ ಸಂಸ್ಕೃತಿ ಮತ್ತು ಸಾಮಾಜಿಕ ಶಿಷ್ಟಾಚಾರದ ಭಾಗವಾಗಿದೆ ಎಂದು ಹೇಳಿದರು.

ಒಬ್ಬರು ತಮ್ಮ ವೈಯಕ್ತಿಕ ಜೀವನವನ್ನು ಹೇಗೆ ನಡೆಸುತ್ತಾರೆ ಎಂಬುದು ನ್ಯಾಯಾಲಯ ನಿರ್ಧರಿಸುವ ವಿಷಯವಲ್ಲ ಎಂದು ನಾನು ನಂಬುತ್ತೇನೆ. ನಂಬಿಕೆ ಎಂಬುದು "ಬಹಳ ದೊಡ್ಡ ವಿಚಾರ" ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಹೇಳಿದರು.

ಪ್ರತಿಯೊಂದು ಧರ್ಮದ ಜನರು ತಮ್ಮದೇ ನಂಬಿಕೆಗಳು ಮತ್ತು ಆಚರಣೆಗಳಲ್ಲಿ ವಿಶ್ವಾಸವಿಟ್ಟು, ಅದಕ್ಕೆ ಅನುಗುಣವಾಗಿ ತಮ್ಮ ಜೀವನವನ್ನು ನಡೆಸುತ್ತಾರೆ. ಸಂವಿಧಾನವು ಪ್ರತಿಯೊಬ್ಬರಿಗೂ ಆ ಹಕ್ಕನ್ನು ನೀಡಿದೆ. ಒಬ್ಬ ವ್ಯಕ್ತಿ ಏನು ಧರಿಸಬೇಕು ಅಥವಾ ಏನು ಧರಿಸಬಾರದು ಎಂಬುದರ ಬಗ್ಗೆ ನ್ಯಾಯಾಲಯ ಆದೇಶ ನೀಡಬೇಕು ಎಂದು ನಾನು ಭಾವಿಸುವುದಿಲ್ಲ. ಅವರ ಧರ್ಮ ಯಾವುದೇ ಆಗಿರಲಿ, ಪ್ರತಿಯೊಬ್ಬ ನಾಗರಿಕನಿಗೂ ತಮಗೆ ಇಷ್ಟವಾದ ರೀತಿಯಲ್ಲಿ ಬದುಕುವ ಮತ್ತು ಉಡುಪು ಧರಿಸುವ ಹಕ್ಕಿದೆ. ಅವರು ದೇಶದ ಕಾನೂನುಗಳನ್ನು ಉಲ್ಲಂಘಿಸಬಾರದು ಎಂಬುದೊಂದೇ ಷರತ್ತು. ಅದನ್ನು ಹೊರತುಪಡಿಸಿ, ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎಂದು ಜಾಫರ್ ಇಸ್ಲಾಂ ಹೇಳಿದರು.

ಆದರೆ, ಶಾಲೆಯು ವಿಭಿನ್ನವಾದ ವ್ಯವಸ್ಥೆಯಾಗಿದೆ. ಶಾಲೆಗಳಲ್ಲಿ ಸಮವಸ್ತ್ರವಿರುತ್ತದೆ. ಏನು ಧರಿಸಬೇಕು ಅಥವಾ ಏನು ಧರಿಸಬಾರದು ಎಂಬುದರ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಶಾಲಾ ಆಡಳಿತಕ್ಕೆ ಬಿಡಬೇಕು. ಇದು ಶಾಲಾ ಆಡಳಿತ ನಿರ್ವಹಿಸಬೇಕಾದ ವಿಷಯವೇ ಹೊರತು, ನ್ಯಾಯಾಲಯಗಳು ನಿರ್ಧರಿಸಬೇಕಾದ ವಿಚಾರವಲ್ಲ ಎಂದು ಬಿಜೆಪಿ ವಕ್ತಾರ ಜಾಫರ್ ಇಸ್ಲಾಂ ಹೇಳಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries