ಮಂಜೇಶ್ವರ: ವರ್ಕಾಡಿ ಪಾವೂರು ಬಜಾಳ್ ಪೊಯ್ಯೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮ ಸೆ. 4 ರಂದು ಶ್ರೀ ಕ್ಷೇತ್ರದ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ರೆಂಜೇಪಡ್ಪು ಉದ್ಘಾಟಿಸುವರು. ಇದೇ ಸಂದರ್ಭ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಸಂಜೆ ನಡೆಯುವ ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಅಧ್ಯಕ್ಷ ವಿಶ್ವನಾಥ ಕಲ್ಲಾಜೆ ಇವರು ಅಧ್ಯಕ್ಷತೆ ವಸುವರು. ಶ್ರೀಧರ ಶೆಟ್ಟಿ ಪಾವೂರು ಗುತ್ತು, ವಿಶ್ವಂಬರ್ ನಾಯಕ್ ಮಳಿಗುತ್ತು, ತ್ಯಾಂಪಣ್ಣ ರೈ ಮುಟ್ಲ ಪಾವೂರು, ಭೋಜ ಮಾಸ್ಟರ್ ಬಲ್ಲೂರು ಗಣೇಶ್ ಟೈಲರ್ ಪಾವೂರು, ಸ್ವರ್ಣೋದ್ಯಮಿ ಅಭಿಲಾಶ್ ಕೆ ವಿ, ರವಿ ಮುಡಿಮಾರು, ಡಾಕ್ಟರ್ ಗಣೇಶ್ ಬಜಾಲ್, ಅಶೋಕ್ ಪಾವೂರು ಸಭೆಯಲ್ಲಿ ಉಪಸ್ಥಿತರಿರುವರು. ನಂತರ ಭಜನಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿಯವರಿಂದ ಭಜನ ಸಂಕೀರ್ತನೆ ನಡೆಯಲಿದೆ.

