ಕಾಸರಗೋಡು: ಯಕ್ಷಗಾನ ಎಂಬುದು ಸಂಗೀತ, ನಾಟ್ಯ, ಅಭಿನಯ ಮೇಳೈಸಿದ ಕಲೆಯಾಗಿದ್ದು, ಯಕ್ಷಗಾನದ ಕಲಿಕೆ ಪುರಾಣದ ಅರಿವು ಹೆಚ್ಚಳಕ್ಕೆ ಸಹಕಾರಿಯಾಗಿರುವುದಾಗಿ ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರದ ಆಡಳಿತಮೊಕ್ತೇಸರ ಉದಯಕುಮಾರ್ ಕುಮಾರಧಾರ ತಿಳಿಸಿದ್ದಾರೆ.
ಅವರು ಪಾಯಿಚ್ಚಾಲಿನ ಶ್ರೀಸ್ಕಂದ ಯಕ್ಷಗಾನ ಕೇಂದ್ರ.ದ ನೇತೃತ್ವದ ಯಕ್ಷಗಾನ ನಾಟ್ಯ ತರಗತಿಯ ಎರಡನೇ ತಂಡದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶೇಷವನ ಕ್ಷೇತ್ರದ ಅರ್ಚಕ ಸುಬ್ರಾಯ ಕಾರಂತರು ದೀಪಬೆಳಗಿಸುವ ಮೂಲಕ ನೂತನ ತಂಡಕ್ಕೆ ಚಾಲನೆ ನೀಡಿದರು. ಶ್ರೀಸ್ಕಂದ ಯಕ್ಷಗಾನ ಕೇಂದ್ರ.ದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಾಟ್ಯಗುರುಗಳಾದ ರಂಜಿತ್ ಗೋಳಿಯಡ್ಕ ಶುಭಹಾರೈಸಿದರು. ತರಗತಿ ಸಂಚಾಲಕ ಮುರಳೀಧರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಕಿರಣ್ ಪಾಯಿಚ್ಚಾಲು ವಂದಿಸಿದರು.



