ಉಪ್ಪಳ: ಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಮತ್ತು ಕರ್ನಾಟಕ ಉತ್ತರ ಇದರ ಜಿಲ್ಲಾ ಮಟ್ಟದ ಸೇವಾದಳ ತರಬೇತಿ ಶಿಬಿರ ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ಪ್ರಾರ್ಥನಾ ಮಂದಿರದಲ್ಲಿ ಜರಗಿತು.
ಕರ್ನಾಟಕ ಉತ್ತರದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಧ್ವಜಾರೋಹಣ ನಡೆಸಿ, ದೀಪ ಪ್ರಜ್ವಲನೆ ನಡೆಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಗವಾನ್ ಶ್ರೀ ಸತ್ಯಸಾಯಿ ಬಾಬಾ- ಅವರ ಅವತಾರ ಮತ್ತು ದೈವೀ ಕಾರ್ಯ'ಗಳ ಬಗಗೆ ವಿಷಯ ಮಂಡಿಸಿದರು.
ರಾಜ್ಯ ಮಹಿಳಾ ಸೇವಾ ಸಂಯೋಜಕಿ ಪ್ರಿಯಾ ಪೈ ಅವರು ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯು ನಿರ್ದೇಶಸಿದ ವಿವಿಧ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿ ಮಾತನಾಡಿದರು.
ಜಿಲ್ಲಾಧ್ಯಕ್ಷರಾದ ಶ್ರೀಎಚ್ ಮಹಾಲಿಂಗ ಭಟ್ ಅವರು 'ಶ್ರೀ ಸತ್ಯಸಾಯಿ ಸೇವಾ ಸಮಿತಿಯ ನಿರ್ವಹಣೆ ಮತ್ತು ಮೂರು ವಿಭಾಗಗಳ ಸಬಲೀಕರಣ'ವಿಷಯದ ಕುರಿತು ಸ್ವಾಮಿಯ ವಿಚಾರಧಾರೆಯನ್ನು ಮಂಡಿಸಿದರು.
ಒಟ್ಟು 82 ಮಂದಿ ಸೇವಾದಳ ಸದಸ್ಯರು ಭಾಗವಹಿಸಿದ ಶಿಬಿರವು ಮಹಾಮಂಗಳಾರತಿ ಮತ್ತು ನಾರಾಯಣ ಸೇವೆಯೊಂದಿಗೆ ಸ್ವಾಮಿಯ ಅನುಗ್ರಹದಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.



