ಮೊರ್ಬಿ: ಇಲ್ಲಿನ ಕೃಷಿ ಜಮೀನಿನಲ್ಲಿರುವ ಬಾವಿಯೊಂದರ ನೀರಿನಲ್ಲಿ ಸಮುದ್ರದ ಅಲೆಗಳ ಮಾದರಿಯ ಚಲನೆ ಕಂಡುಬಂದಿದ್ದು, ಸ್ಥಳೀಯರಲ್ಲಿ ತೀವ್ರ ಕೌತುಕ ಹಾಗೂ ಅಚ್ಚರಿ ಮೂಡಿಸಿದೆ.
ಈ ಅಪರೂಪದ ನೈಸರ್ಗಿಕ ವಿದ್ಯಮಾನದ ಕುರಿತು ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅಂತರ್ಜಲ ಸಂಶೋಧನಾ ತಂಡಕ್ಕೆ ಸೂಚಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಈ ವಿಸ್ಮಯವನ್ನು ವೀಕ್ಷಿಸಲು ಧಾವಿಸುತ್ತಿದ್ದಾರೆ.
ಬಾವಿಯಲ್ಲಿ ಹಠಾತ್ತನೆ ಇಂತಹ ಅಲೆಗಳು ಸೃಷ್ಟಿಯಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಹಾಗೂ ಅಂತರ್ಜಲ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
Morbi, Gujarat: In an astonishing event, water in a well is oscillating wildly after being flooded by heavy rainfall. @grok @Grokipedia can you please explain the phenomenon why this is happening? What kind of geological activity beneath the surface can cause this oscillation?

