HEALTH TIPS

ಅರಣ್ಯದಲ್ಲಿ ರುಂಡದಿಂದ ಬೇರ್ಪಟ್ಟು ಜೀರ್ಣಿಸಿದ ಸ್ಥಿತಿಯಲ್ಲಿ ಅಪರಿಚಿತ ಪುರುಷ ಮೃತದೇಹ ಪತ್ತೆ

ಕಾಸರಗೋಡು: ಅರಣ್ಯದಲ್ಲಿ ಅಪರಿಚಿತ ಗಂಡಸಿನ ರುಂಡದಿಂದ ಬೇರ್ಪಟ್ಟ ಜೀರ್ಣಗೊಂಡ ಮೃತದೇಹ ಪತ್ತೆಯಾಗಿದೆ. ರಾಜಪುರಂಗೆ ಸಮೀಪದ ವಟ್ಟಕಯಂ ಎನ್.ಎಸ್.ಎಸ್ ಎಸ್ಟೇಟ್ ಸಮೀಪದ ಕರಿಂಕೋಲ್‍ನ ಅರಣ್ಯದಲ್ಲಿ ಮೃತದೇಹ ಪತ್ತೆಯಾಗಿದೆ. 


ಆಣಬೆ ಸಂಗ್ರಹಕ್ಕಾಗಿ ಕಾಡಿಗೆ ತೆರಳಿದವರು ಮೃತದೇಹ ಕಂಡಿದ್ದು, ಇವರು ನೀಡಿದ ಮಾಹಿತಿಯಂತೆ ರಾಜಪುರಂ ಠಾಣೆ ಪೆÇಲೀಸರು ಮತ್ತು ಪನತ್ತಡಿ ಸೆಕ್ಷನ್ ಅರಣ್ಯಾಧಿಕಾರಿಗಳು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿ ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.  ಒಂದು ತಿಂಗಳ ಹಿಂದೆ ಈ ಸಾವು ಸಂಭವಿಸಿರುವುದಾಗಿ ಪೆÇಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಮೃತದೇಹದಿಂದ ತಲೆ ಪೂರ್ಣವಾಗಿ  ಬೇರ್ಪಟ್ಟ ಸ್ಥಿತಿಯಲ್ಲಿದ್ದು, ಸನಿಹ ಪ್ಲಸ್ಟಿಕ್ ದಾರವೊಂದು ಪತ್ತೆಯಾಗಿದೆ. ವ್ಯಕ್ತಿ ನೇಣು ಬಿಗಿದು ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.  ಪೆÇಲೀಸರು ಪಂಚನಾಮೆ ನಡೆಸಿದ ಬಳಿಕ ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜಿಗೆ ಸಾಗಿಸಿದ್ದಾರೆ. 

ರಾಜಪುರಂ ಪೆÇಲೀಸ್ ಠಾಣೆ ವ್ಯಾಪ್ತಿಯ ಮೌಕೋಡು ನಿವಾಸಿಯೊಬ್ಬರು ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ವ್ಯಕ್ತಿಯ ಬಗ್ಗೆ ಹುಡುಕಾಟ ನಡೆಸುವ ಮಧ್ಯೆ ಮೃತದೇಹ ಪತ್ತೆಯಾಗಿದೆ.  ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿಯಲು ಸಾಧ್ಯವೆಂದು ಪೋಲೀಸರು ತಿಳಿಸಿದ್ದಾರೆ.

(ಚಿತ್ರ ಸಾಂದರ್ಭಿಕ-ಸಮರಸ ಆರ್ಕೈವ್ಸ್ )


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries