ಕಾಸರಗೋಡು: ಜಿಲ್ಲಾ ಸ್ಪೆಷಲ್ ಮೊಬೈಲ್ ಸ್ಕ್ವಾಡ್ ಡಿವೈಎಸ್‌ಪಿ ಆಗಿ ಟಿ. ಉತ್ತಮ್‌ದಾಸ್ ಅಧಿಕಾರ ಸ್ವೀಕರಿಸಿದರು. ಕಲ್ಲಿಕೋಟೆ ರೂರಲ್ ನಾರ್ಕೋಟಿಕ್ ಸೆಲ್ ಆಂಡ್ ಜೆಂಟರ್ ಜಸ್ಟೀಸ್ ವಿಭಾಗ ಡಿವೈಎಸ್‌ಪಿಯಾಗಿರು ವಾಗ ಅವರಿಗೆ ಕಾಸರಗೋಡಿಗೆ ವರ್ಗಾವಣೆ ಲಭಿಸಿದೆ. ಬೇಕಲ, ವಿದ್ಯಾನಗರ, ಕಾಸರಗೋಡು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಿನ್ಸಿಪಲ್ ಎಸ್‌ಐ ಆಗಿಯೂ, ಬೇಡಡ್ಕ, ಮೇ ಲ್ಪರಂಬ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಆಗಿಯೂ, ಜಿಲ್ಲಾ ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. 2025ರಲ್ಲಿ ಮುಖ್ಯ ಮಂತ್ರಿಯ ಪೊಲೀಸ್ ಮೆಡಲ್, ಡಿಜಿಪಿಯ ಬ್ಯಾಡ್ಜ್ ಆರ್ಡರ್ ಪ್ರಶಸ್ತಿ ಇವರಿಗೆ ಲಭಿಸಿತ್ತು. ಕೇಳೋತ್ತ್ ಹರಿಪುರಂ ನಿವಾಸಿಯಾಗಿದ್ದಾರೆ.


