HEALTH TIPS

ಟಿ.ವಿ ಜಾಹೀರಾತು ಮಿತಿ ತೆರವು: ಕೇಂದ್ರದಿಂದ ಶೀಘ್ರ ಅಧಿಸೂಚನೆ

ನವದೆಹಲಿ: ಟಿ.ವಿ. ಚಾನೆಲ್‌ಗಳು ಪ್ರತಿ ಒಂದು ಗಂಟೆಗೆ 12 ನಿಮಿಷ ಮಾತ್ರ ಜಾಹೀರಾತು ಪ್ರಸಾರ ಮಾಡಬೇಕು ಎಂಬ ನಿರ್ಬಂಧವನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 


'ಕೇಬಲ್‌ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳು-1994ರ ತಿದ್ದುಪಡಿ ಕಾಯ್ದೆಯ ಅಧಿಸೂಚನೆ ಶೀಘ್ರ ಹೊರಬೀಳಲಿದ್ದು, ಅಂದಿನಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ' ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ ತಿಳಿಸಿದೆ.

'ಆರೋಗ್ಯಕರ ಮತ್ತು ನ್ಯಾಯಯುತ ಸ್ಪರ್ಧೆ ಉತ್ತೇಜಿಸಲು ಹಾಗೂ ಉದ್ಯಮ ನಡೆಸುವುದನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಇಲಾಖೆ ಹೇಳಿದೆ.

2006ರಲ್ಲಿ ಕಾಯ್ದೆಯ ನಿಯಮ 7(11)ರ ಅಡಿಯಲ್ಲಿ ಮಿತಿಯನ್ನು ಹೇರಲಾಗಿತ್ತು. ಜಾಹೀರಾತು ಬಿತ್ತರಿಸುವ 12 ನಿಮಿಷದ ಅವಕಾಶದಲ್ಲಿ 10 ನಿಮಿಷ ವಾಣಿಜ್ಯ ಮತ್ತು 2 ನಿಮಿಷ ಸ್ವಯಂ ಪ್ರಚಾರದ (ಸೆಲ್ಫ್‌ ಪ್ರಮೋಷನಲ್‌) ಅಂಶಗಳು ಇರಬೇಕು ಎಂದು ಹೇಳಲಾಗಿತ್ತು.

'ನಿರ್ಬಂಧ ಜಾರಿಯಾದ ನಂತರದಲ್ಲಿ ಟಿ.ವಿ. ಪ್ರಸಾರ ವಲಯ ವ್ಯಾಪಕ ಬದಲಾವಣೆ ಕಂಡಿದೆ. 2006ರಲ್ಲಿ ಕೇವಲ 62 ಟಿ.ವಿ. ಚಾನೆಲ್‌ಗಳಿದ್ದವು. ಈಗ ಅವುಗಳ ಸಂಖ್ಯೆ 900ಕ್ಕೆ ತಲುಪಿದೆ. ಈ ಹಿಂದೆ ಕೇಬಲ್‌ ಮೂಲಕ ಟಿ.ವಿ. ಪ್ರಸಾರ ಆಗುತ್ತಿತ್ತು. ಈಗ ಡಿಜಿಟಲ್‌ ಸ್ವರೂಪ ಪಡೆದಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಾಹಿನಿಗಳು ಬೆಳೆದಿವೆ' ಎಂದು ಸಚಿವಾಲಯ ತಿಳಿಸಿದೆ.

'ಡಿಟಿಎಚ್‌, ಕೇಬಲ್‌ ಟಿ.ವಿ, ಎಚ್‌ಐಟಿಎಸ್‌, ಐಪಿಟಿವಿ ಸೇರಿದಂತೆ ಹಲವು ಡಿಜಿಟಲ್ ವೇದಿಕೆಗಳಿವೆ. ಟಿ.ವಿ ಉದ್ಯಮ ಮತ್ತು ಡಿಜಿಟಲ್ ಮಾಧ್ಯಮಗಳು ಇಂದು ಜಾಹೀರಾತನ್ನೇ ಹೆಚ್ಚು ಅವಲಂಬಿಸಿವೆ. ಉಚಿತ ಮತ್ತು ಪಾವತಿ ಚಾನೆಲ್‌ಗಳಲ್ಲೂ ಈ ಪೈಪೋಟಿ ಇದೆ. ಟಿ.ವಿ. ಪ್ರಸಾರ ಕ್ಷೇತ್ರದ ಬದಲಾವಣೆ ಗಮನದಲ್ಲಿ ಇಟ್ಟುಕೊಂಡು ಜಾಹೀರಾತು ಅವಧಿ ನಿರ್ಬಂಧ ತೆರವಿಗೆ ನಿರ್ಧರಿಸಲಾಗಿದೆ' ಎಂದು ಪ್ರಕಟಣೆ ತಿಳಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries