HEALTH TIPS

ನೀರ್ಚಾಲಿನಲ್ಲಿ ಮೇಲೈಸಿದ ಗುರು ದಕ್ಷಿಣೆ ಯಕ್ಷಗಾನ ತಾಳಮದ್ದಳೆ

ಬದಿಯಡ್ಕ: ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನೀರ್ಚಾಲು ನೇತೃತ್ವದಲ್ಲಿ ಅಗ್ರಮಾನ್ಯ ಕಲಾವಿದರ ಕೂಡುವಿಕೆಯ ಮಳೆಗಾಲದ ಮಹೋನ್ನತ ಯಕ್ಷಗಾನ ತಾಳಮದ್ದಳೆ ಭಾನುವಾರ ಅಪರಾಹ್ನ ನೀರ್ಚಾಲು ಶಾಲಾ ವಠಾರದಲ್ಲಿ ಜರಗಿತು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ, ಸಾಮಾಜಿಕ ಧಾರ್ಮಿಕ ಮುಖಂಡ ಜಯದೇವ ಖಂಡಿಗೆ ದೀಪಬೆಳಗಿಸಿ ಉದ್ಘಾಟಿಸಿದರು. ಅಗಲಿದ ಹಿರಿಯ ಕಲಾವಿದ ಡಾ. ಸೂರಿಕುಮೇರಿ ಗೋವಿಂದ ಭಟ್ ಇವರಿಗೆ ನುಡಿನಮನ ಸಲ್ಲಿಸಲಾಯಿತು. 


ಬಳಿಕ ಗುರುದಕ್ಷಿಣೆ (ದ್ರುಪದ ಗರ್ವಭಂಗ) ಕಥಾಭಾಗದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಚಿನ್ಮಯ ಭಟ್ ಕಲ್ಲಡ್ಕ, ತಲ್ಪಣಾಜೆ ವೆಂಕಟ್ರಮಣ ಭಟ್, ಚೆಂಡೆಮದ್ದಳೆಯಲ್ಲಿ ಶ್ರೀಧರ ವಿಟ್ಲ, ಲಕ್ಷ್ಮೀಶ ಬೇಂಗ್ರೋಡಿ ಹಾಗೂ ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್(ಏಕಲವ್ಯ), ರಾಧಾಕೃಷ್ಣ ಕಲ್ಚಾರು(ದ್ರೋಣಾಚಾರ್ಯ), ಶ್ರೀರಮಣ ಆಚಾರ್ಯ(ದ್ರುಪದ), ವಿಷ್ಣುಶರ್ಮ ವಾಟೆಪಡ್ಪು(ಅರ್ಜುನ) ಪಾತ್ರ ನಿರ್ವಹಣೆ ಮೂಲಕ ಜನಮನ ರಂಜಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries