ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಕುರಿತು 'ಬೆಟ್ಟಗಳಲ್ಲಿ ನಡೆದ ನಾಟಕ' ಎಂದು ಬಣ್ಣಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಶಶಿ ತರೂರ್, 'ನೇಪಾಳಬೆಟ್ಟಗಳಲ್ಲಿ ನಡೆದ ನಾಟಕ'ದ ಬಗ್ಗೆ ಯಾವುದೇ ಅರಿವಿಲ್ಲದೆ ಕಠ್ಮಂಡುವಿಗೆ ಹೊರಟೆವು.
ತ್ರಿಶೂಲಿ, ಭೋಟೆ ಕೋಶಿ ನದಿಯಲ್ಲಿ ದಿಢೀರ್ ಸಂಭವಿಸಿದ ಪ್ರವಾಹವು ವ್ಯಾಪಕ ಹಾನಿಯುಂಟು ಮಾಡಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಈ ಘಟನೆ ಸಂಭವಿಸಿದೆ ಎಂದು ವಿಜ್ಞಾನಿಗಳ ಊಹೆ ಆಗಿದೆ' ಎಂದು ಹೇಳಿಕೊಂಡಿದ್ದಾರೆ.
'ಈ ಘಟನೆಯಲ್ಲಿ 150ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 2000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ದಿಢೀರ್ ಪ್ರವಾಹದಿಂದ 19ಕ್ಕೂ ಹೆಚ್ಚು ಸೇತುವೆಗಳು ಹಾಗೂ ಹೆದ್ದಾರಿಗಳು ಕೊಚ್ಚಿ ಹೋಗಿವೆ. 8 ಜಲವಿದ್ಯುತ್ ಯೋಜನೆಗಳಿಗೆ ಭಾರಿ ಹಾನಿ ಉಂಟುಮಾಡಿದೆ. ಭಾರತ ಸರ್ಕಾರ ನೀಡಿರುವ ಪರಿಹಾರದ ಭರವಸೆಯನ್ನು ನಾನು ಬೆಂಬಲಿಸುತ್ತೇನೆ' ಎಂದಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರೆಳಿದ್ದ ನೂರಾರು ಭಾರತೀಯರು ಈ ಘಟನೆಯ ಬಳಿಕ ನಾಪತ್ತೆ ಆಗಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನಾಪತ್ತೆ ಆದವರಿಗಾಗಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.
ಶಶಿ ತರೂರ್ ಅವರು ನೇಪಾಳ ಪ್ರವಾಹವನ್ನು 'ಬೆಟ್ಟಗಳಲ್ಲಿ ನಡೆದ ನಾಟಕ' ಎಂದಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

