HEALTH TIPS

ಬೆಂಗಳೂರಿನಲ್ಲೇ ಏರೋ ಇಂಡಿಯಾ 16ನೇ ಆವೃತ್ತಿ

ನವದೆಹಲಿ: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ, ವಿಶ್ವದ ಪ್ರಮುಖಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನ ಗಳಲ್ಲಿ ಒಂದಾದ 'ಏರೋ ಇಂಡಿಯಾ'ದ 16ನೇ ಆವೃತ್ತಿ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.


ಯಲಹಂಕದ ವಾಯುನೆಲೆಯಲ್ಲಿ 2027ರ ಫೆಬ್ರುವರಿ 8ರಿಂದ 12ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ.

ಪ್ರಮುಖ ಜಾಗತಿಕ ಬಾಹ್ಯಾಕಾಶ ಮತ್ತುರಕ್ಷಣಾ ಕಂಪನಿಗಳು, ನೀತಿ ನಿರೂಪಕರು, ತಂತ್ರಜ್ಞಾನ ತಜ್ಞರು, ಉದ್ಯಮದ ಪಾಲುದಾರರು ಮತ್ತುರಕ್ಷಣಾ ಪಡೆಗಳ ಸಿಬ್ಬಂದಿ ಭಾಗಿಯಾಗಲಿ ದ್ದಾರೆ. ಏರೋ ಇಂಡಿಯಾ- 2027ಕ್ಕಾಗಿ ವೆಬ್ ಆಧಾರಿತ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ. ಆನ್‌ಲೈನ್ ನೋಂದಣಿ ಮತ್ತು ಪ್ರದರ್ಶನ ಸ್ಥಳದ ಬುಕಿಂಗ್‌ ಅನ್ನು www.aeroindia.gov.in ಮೂಲಕ ಮಾಡಬಹುದು. ವಸ್ತು ಪ್ರದರ್ಶಕರ ನೋಂದಣಿ ಗುರುವಾರದಿಂದ ಆರಂಭ ವಾಗಲಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ವೈಮಾನಿಕ ಪ್ರದರ್ಶನವು ಲಖನೌ ಅಥವಾ ಹೈದರಾಬಾದ್‌ ಅಥವಾ ಗೋವಾಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿ ಈ ಹಿಂದೆ ಹಬ್ಬಿತ್ತು. ಇದಕ್ಕೆ ಪೂರಕವಾಗಿ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿಕೆ ನೀಡಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries