HEALTH TIPS

ಭಾರತದ ಶಸ್ತ್ರಾಗಾರದಲ್ಲಿ 190 ಸಿಡಿತಲೆಗಳಿವೆ: ಅಮೆರಿಕದ ವಿಜ್ಞಾನಿಗಳ ಒಕ್ಕೂಟ

ವಾಷಿಂಗ್ಟನ್ (PTI): 'ಭಾರತದ ಶಸ್ತ್ರಾಗಾರದಲ್ಲಿ ಅಂದಾಜು 190 ಪರಮಾಣು ಸಿಡಿತಲೆಗಳಿವೆ. ಉತ್ಪಾದನಾ ಹಂತದಲ್ಲಿರುವ ಹೊಸ ಕ್ಷಿಪಣಿಗಳ ಹೆಚ್ಚುವರಿ 30 ಸಿಡಿತಲೆಗಳೂ ಇದರಲ್ಲಿ ಸೇರಿವೆ' ಎಂದು ಅಮೆರಿಕದ ವಿಜ್ಞಾನಿಗಳ ಒಕ್ಕೂಟ ಹೇಳಿದೆ.


'ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳು, ಸರ್ಕಾರಿ ದತ್ತಾಂಶ ಮತ್ತು ವಾಣಿಜ್ಯ ಉಪಗ್ರಹಗಳಿಂದ ಪಡೆಯಲಾದ ಚಿತ್ರಗಳನ್ನು ವಿಶ್ಲೇಷಿಸಿ ಲೆಕ್ಕ ಹಾಕಲಾಗಿದೆ' ಎಂದು ಒಕ್ಕೂಟದ ಪರಮಾಣು ಮಾಹಿತಿ ಯೋಜನೆಯ ನಿರ್ದೇಶಕ ಹನ್ಸ್ ಕ್ರಿಸ್ಟೆನ್ಸನ್ ಅವರು ಬರೆದ 'ಭಾರತದ ಪರಮಾಣು ಸಿಡಿತಲೆಗಳು-2026' ಎಂಬ ಲೇಖನದಲ್ಲಿ ತಿಳಿಸಲಾಗಿದೆ. 

'ಭಾರತವು ಪರಮಾಣು ಶಸ್ತ್ರಾಗಾರವನ್ನು ಆಧುನೀಕರಿಸುವ ಕಾರ್ಯವನ್ನು ಮುಂದುವರಿಸಿದೆ. ಈಚೆಗೆ ಅನೇಕ ಹೊಸ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ. ಸದ್ಯ ಇರುವ ಪರಮಾಣು ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯದ ವಿಮಾನ, ಭೂಮಿ ಹಾಗೂ ಸಮುದ್ರದ ಮೇಲಿನಿಂದ ಉಡಾಯಿಸುವ ವ್ಯವಸ್ಥೆಗೆ ಪೂರಕವಾಗಿ ಅಥವಾ ಅವುಗಳನ್ನು ಬದಲಾಯಿಸುವ ಉದ್ದೇಶದಿಂದ ಉತ್ಪಾದನಾ ಕಾರ್ಯಗಳು ಪ್ರಗತಿಯಲ್ಲಿವೆ' ಎಂದು ಲೇಖನದಲ್ಲಿ ವಿವರಿಸಲಾಗಿದೆ.

'ಭಾರತವು 140ರಿಂದ 225 ಸಿಡಿತಲೆಗಳಿಗೆ ಸಾಲುವಷ್ಟು ಸೇನಾ ಗುಣಮಟ್ಟದ ಪ್ಲುಟೋನಿಯಂ ಉತ್ಪಾದನೆ ಮಾಡಿಕೊಂಡಿದೆ ಹಾಗೂ ಅವುಗಳಲ್ಲಿ 190ನ್ನು ಈಗಾಗಲೇ ಜೋಡಿಸಿರುವ ಸಾಧ್ಯತೆ ಇದೆ' ಹೇಳಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries