HEALTH TIPS

ರೇರಾ ವಿಫಲ: 27 ಲಕ್ಷ ಮನೆ ಖರೀದಿದಾರರಿಗೆ ಸಂಕಷ್ಟ

ನವದೆಹಲಿ: ರೇರಾ ಕಾನೂನನ್ನು ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ರಾಜ್ಯಗಳಲ್ಲಿನ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರಗಳು (ರೇರಾ) ವಿಫಲವಾಗಿವೆ, ರೇರಾ ನೋಂದಾಯಿತ ಯೋಜನೆಗಳಲ್ಲಿನ ವಿಳಂಬದಿಂದ ದೇಶದಲ್ಲಿ ಅಂದಾಜು 27.6 ಲಕ್ಷ ಮನೆ ಖರೀದಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಫೋರಂ ಫಾರ್ ಪೀಪಲ್ಸ್‌ ಕಲೆಕ್ಟಿವ್‌ ಎಫರ್ಟ್ಸ್‌ (ಎಫ್‌ಪಿಸಿಇ) ಹೇಳಿದೆ. 


ರೇರಾ ಕಾಯ್ದೆಗೆ 10 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಎಫ್‌ಪಿಸಿಇ 192 ಪುಟಗಳ ವರದಿ ಸಿದ್ಧಪಡಿಸಿದೆ.

ಮನೆ ಖರೀದಿದಾರರ ಹಿತಾಸಕ್ತಿಯನ್ನು ರಕ್ಷಿಸಲು ಕೇಂದ್ರ ಸರ್ಕಾರ ರೇರಾ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯು ರಿಯಲ್ ಎಸ್ಟೇಟ್‌ ವಲಯದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ಉದ್ದೇಶ ಹೊಂದಿದೆ.

'ರೇರಾ ಒಂದು ಕಾನೂನಾಗಿ ವಿಫಲವಾಗಿಲ್ಲ. ಅದರ ಜಾರಿಯಲ್ಲಿ ವಿಫಲವಾಗಿದೆ. ಅನುಷ್ಠಾನ ದುರ್ಬಲವಾದಲ್ಲಿ, ಎಂತಹ ಸದೃಢ ಕಾನೂನಾದರೂ ಅದು ವಿಫಲವಾಗುತ್ತದೆ' ಎಂದು ಎಫ್‌ಪಿಸಿಇನ ಅಧ್ಯಕ್ಷ ಅಭಯ್ ಉಪಾಧ್ಯಾಯ ಹೇಳಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, 2026ರ ಮಾರ್ಚ್ 2ರವರೆಗೆ ದೇಶದಲ್ಲಿ ಅಂದಾಜು 27.6 ಲಕ್ಷ ಮನೆ ಖರೀದಿದಾರರ ಹಣ, ಬಿಲ್ಡರ್‌ಗಳ ಬಳಿ ಸಿಲುಕಿಕೊಂಡಿದೆ. ಪ್ರತಿ ಕುಟುಂಬವು ಕನಿಷ್ಠ ₹45 ಲಕ್ಷ ಪಾವತಿಸಿದೆ ಎಂದು ಲೆಕ್ಕಹಾಕಿದರೆ, ಒಟ್ಟು ₹12 ಲಕ್ಷ ಕೋಟಿಗೂ ಅಧಿಕ ಮೊತ್ತವು ಪೂರ್ಣಗೊಳ್ಳದ ಯೋಜನೆಗಳಲ್ಲಿ ಸಿಲುಕಿಕೊಂಡಿದೆ ಎಂದು ಉಪಾಧ್ಯಾಯ ಅವರು ವರದಿಯಲ್ಲಿ ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries