HEALTH TIPS

ಎಲ್‌ಪಿಜಿಗಾಗಿ ಹಳ್ಳಿಯವರು ಇನ್ನು 45 ದಿನ ಕಾಯಬೇಕಿಲ್ಲ: ಸಚಿವ ಸುರೇಶ್ ಗೋಪಿ

ತಿರುವನಂತಪುರ (PTI): ಗ್ರಾಮೀಣ ಪ್ರದೇಶದ ಗ್ರಾಹಕರು ಒಂದು ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಿದ ನಂತರದಲ್ಲಿ ಇನ್ನೊಂದು ಸಿಲಿಂಡರ್ ಬುಕ್ ಮಾಡಲು ಇನ್ನು ಮುಂದೆ 45 ದಿನ ಕಾಯಬೇಕಿಲ್ಲ.


ಅವರು ಕೂಡ ನಗರ ಪ್ರದೇಶದ ಗ್ರಾಹಕರಂತೆಯೇ, ಒಂದು ಸಿಲಿಂಡರ್ ಬುಕ್ ಮಾಡಿದ 25 ದಿನಗಳ ನಂತರ ಇನ್ನೊಂದು ಸಿಲಿಂಡರ್ ಬುಕ್ ಮಾಡಬಹುದು.

ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಬುಕಿಂಗ್ ಅಂತರವನ್ನು ತಕ್ಷಣವೇ ಒಂದೇ ಬಗೆಯಲ್ಲಿ ನಿಗದಿ ಮಾಡಬೇಕು ಎಂದು ತೈಲೋತ್ಪನ್ನ ಮಾರಾಟ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಅವರು ಸೋಮವಾರ ಫೇಸ್‌ಬುಕ್‌ ಮೂಲಕ ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ನಂತರದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಹೀಗಾಗಿ, ಗ್ರಾಮೀಣ ಪ್ರದೇಶದ ಗ್ರಾಹಕರು ಒಂದು ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಿದ 45 ದಿನಗಳ ನಂತರವೇ ಇನ್ನೊಂದನ್ನು ಬುಕ್ ಮಾಡಬಹುದು ಎಂಬ ನಿಯಮ ಜಾರಿಗೆ ತರಲಾಯಿತು. ನಗರ ಪ್ರದೇಶದ ಗ್ರಾಹಕರಿಗೆ ಈ ಅಂತರವು 25 ದಿನಗಳಾಗಿವೆ.

'ಈಗ ಎಲ್‌ಪಿಜಿ ಪೂರೈಕೆ ಸ್ಥಿತಿ ಸುಧಾರಿಸುತ್ತಿದೆ, ಬುಕ್‌ ಮಾಡಿದವರಿಗೆ ಎಲ್‌ಪಿಜಿ ಪೂರೈಕೆ ಬಾಕಿ ಗಣನೀಯವಾಗಿ ಕಡಿಮೆ ಆಗಿದೆ. ಹೀಗಾಗಿ, ಕೇಂದ್ರ ಸರ್ಕಾರವು ನಿರ್ಬಂಧವನ್ನು ಸಡಿಲಿಸಿದೆ' ಎಂದು ಗೋಪಿ ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries