HEALTH TIPS

ತೈಲ ಒತ್ತಡ ಕುಸಿತ; ಕೊಚ್ಚಿಗೆ ಹಿಂದಿರುಗಿದ ಅಬುಧಾಬಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ

ನವದೆಹಲಿ:  ಕಳೆದ ವಾರ ಕೊಚ್ಚಿಯಿಂದ ಅಬುಧಾಬಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಎಂಜಿನ್ನಲ್ಲಿ ತೈಲದ ಪ್ರಮಾಣ ಕುಸಿದ ಕಾರಣ, ಹಾರಾಟ ಆರಂಭಿಸಿದ ಸುಮಾರು 50 ನಿಮಿಷಗಳ ಬಳಿಕ ವಿಮಾನ ವಾಪಸಾಯಿತು. ಈ ಘಟನೆ ತಡವಾಗಿ ಸೋಮವಾರ ವರದಿಯಾಗಿದೆ. 


ವಿಮಾನದ ಪೈಲಟ್ ಗಳು ತೈಲದ ಒತ್ತಡ ಕುಸಿತವನ್ನು ಗಮನಿಸಿ ಇಂಜಿನ್ ಅನ್ನು ಸ್ಥಗಿತಗೊಳಿಸಿ, ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು.

ಆದರೆ, ಕಾಕ್ಪಿಟ್ ನಲ್ಲಿ ಉಂಟಾಗಿದ್ದ ಈ ಗಂಭೀರ ಪರಿಸ್ಥಿತಿಯ ಅರಿವು ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಇರಲಿಲ್ಲ ಎಂದು ವರದಿಯಾಗಿದೆ.

ವಿಮಾನ ಸುಮಾರು 36 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದಾಗ ಇಂಜಿನ್ 1ರ ತೈಲದ ಪ್ರಮಾಣ ವೇಗವಾಗಿ ಕಡಿಮೆಯಾಗುತ್ತಿರುವುದನ್ನು ಪೈಲಟ್ ಗಳು ಗಮನಿಸಿದರು. ಸಿಬ್ಬಂದಿ ಕೂಡಲೇ 'ಫೋರ್ ಡೆಕ್' ಮೌಲ್ಯಮಾಪನ ನಡೆಸಿದರು. ತೈಲದ ಪ್ರಮಾಣ ಇಳಿಯುತ್ತಲೇ ಇದ್ದುದರಿಂದ ಅಬುಧಾಬಿ ಪ್ರಯಾಣವನ್ನು ರದ್ದುಗೊಳಿಸಿ ಕೊಚ್ಚಿಗೆ ಹಿಂದಿರುಗಲು ನಿರ್ಧರಿಸಿದರು.

ಕಮಾಂಡರ್ ಹೆಚ್ಚಿನ ಆವರ್ತನಗಳ ರೇಡಿಯೊ ತರಂಗಗಳ ಮೂಲಕ ಮುಂಬೈ ರೇಡಿಯೊವನ್ನು ಸಂಪರ್ಕಿಸಿದರು. ಅಲ್ಲದೆ, ವಿಮಾನವು ಹಿಂದಿರುಗುತ್ತಿರುವ ಬಗ್ಗೆ ವಿಮಾನಯಾನ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದರು. ಪೈಲಟ್ ಇಂಜಿನ್ ನ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾ, ವಾಪಸ್ ಬರುವಾಗ ಎದುರಾಗಬಹುದಾದ ತುರ್ತು ಪರಿಸ್ಥಿತಿಗೆ ಸಿದ್ಧರಾದರು.

ವಿಮಾನ ಹಿಂದಿರುಗಲು ಆರಂಭಿಸಿದ ಸುಮಾರು 45 ನಿಮಿಷಗಳ ಬಳಿಕ ಇಂಜಿನ್ 1ರ ತೈಲದ ಒತ್ತಡದಲ್ಲಿ ಏರಿಳಿತ ಆರಂಭವಾಯಿತು ಹಾಗೂ ಕಾಕ್ಪಿಟ್ ಗೇಜ್ ನಲ್ಲಿ ಅಪಾಯದ ವಲಯ ಪ್ರವೇಶಿಸಿತು. ಇದು ಅಪಾಯಕಾರಿ ಕಡಿಮೆ ಒತ್ತಡವನ್ನು ಸೂಚಿಸುತ್ತದೆ. ಬಳಿಕ ಸಿಬ್ಬಂದಿ ನಾನ್-ನಾರ್ಮಲ್ ಚೆಕ್ಲಿಸ್ಟ್ ಅನ್ನು ಅನುಸರಿಸಿದರು ಹಾಗೂ ಇಂಜಿನ್ ಅನ್ನು ಬಂದ್ ಮಾಡಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries