HEALTH TIPS

ಇಂಧನ ದರದಲ್ಲಿ ಬದಲಾವಣೆ: ತೈಲೋತ್ಪನ್ನ ಕಂಪನಿಗಳಿಗೆ ದಿನಕ್ಕೆ ₹530 ಕೋಟಿ ನಷ್ಟ

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಳವಾಗಿದ್ದರೂ, ದೇಶದಲ್ಲಿ ಇಂಧನ ದರದಲ್ಲಿ ಬದಲಾವಣೆ ಆಗದಿರುವ ಕಾರಣದಿಂದ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು (ಒಎಂಸಿ) ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ದಿನಕ್ಕೆ ಅಂದಾಜು ₹530 ಕೋಟಿವರೆಗೆ ನಷ್ಟ ಅನುಭವಿಸುತ್ತಿವೆ ಎಂದು ರೇಟಿಂಗ್ ಸಂಸ್ಥೆ ಐಸಿಆರ್‌ಎ ಅಂದಾಜಿಸಿದೆ.  


ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಲೀಟರ್ ಪೆಟ್ರೋಲ್‌ ಮಾರಾಟದಿಂದ ₹8 ಮತ್ತು ಡೀಸೆಲ್ ಮಾರಾಟದಿಂದ ₹9 ನಷ್ಟ ಅನುಭವಿಸುತ್ತಿವೆ. ಇದೇ ವೇಳೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಮಾರಾಟದಿಂದ ಒಂದು ಸಿಲಿಂಡರ್‌ಗೆ ₹300ರಷ್ಟು ನಷ್ಟ ಎದುರಿಸುತ್ತಿವೆ ಎಂದು ಹೇಳಿದೆ.

ಜಾಗತಿಕ ಮಟ್ಟದಲ್ಲಿನ ರಾಜಕೀಯ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದಿಂದ ಕಚ್ಚಾ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದರಿಂದ, ಬೆಲೆ ಏರಿಕೆಯಾಗಿತ್ತು. ಈಗ ಅಮೆರಿಕ-ಇರಾನ್ ಸಂಘರ್ಷ, ಸೌದಿ ಅರೇಬಿಯಾವು ತೈಲ ಪೂರೈಕೆಯ ಪ್ರಮುಖ ಪೈಪ್‌ಲೈನ್ ಸ್ಥಗಿತಗೊಳಿಸಿರುವುದು ಮತ್ತು ಕೆಂಪು ಸಮುದ್ರದಲ್ಲಿ ಹೂಥಿ ಬಂಡುಕೋರರ ದಾಳಿ ಯಿಂದಾಗಿ ಕಚ್ಚಾ ತೈಲ ದರ ಮತ್ತೆ ಹೆಚ್ಚಳವಾಗಿದೆ.

ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ದರವು ಸೋಮವಾರ (ಸೆ.21ರಂದು) ಪ್ರತಿ ಬ್ಯಾರಲ್‌ಗೆ 117.4 ಡಾಲರ್ ಆಗಿತ್ತು. ಇದರ ಬೆಲೆ ಕಳೆದ ಆರ್ಥಿಕ ವರ್ಷದಲ್ಲಿ ಸರಾಸರಿ 66 ಡಾಲರ್‌ನಷ್ಟಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries