HEALTH TIPS

ರಿಯಾದ್‌: ಕಿಂಗ್‌ ಖಾಲಿದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ದಟ್ಟ ಹೊಗೆ

ರಿಯಾದ್‌/ದುಬೈ: ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿರುವ 'ಕಿಂಗ್‌ ಖಾಲಿದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ'ದ ಬಳಿ ಶನಿವಾರ ತೈಲ ಟ್ಯಾಂಕರ್‌ವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಎದ್ದಿತ್ತು. ಇದರಿಂದಾಗಿ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯವಾಗಿತ್ತು. 


ಇರಾನ್‌ ಬೆಂಬಲಿತ, ಯೆಮನ್‌ನ ಹೂಥಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಹಡಗುಗಳು ಮತ್ತು ಕೆಲ ಪ್ರದೇಶಗಳ ಮೇಲೆ ಕಳೆದ ಒಂದು ತಿಂಗಳಿನಿಂದ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸೌದಿ ಅರೇಬಿಯಾ ಕೂಡ ದಾಳಿ ನಡೆಸುತ್ತಿದೆ.

ದಾಳಿ-ಪ್ರತಿದಾಳಿ ಆರಂಭವಾದ ಕಳೆದ ಒಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾವು ರಿಯಾದ್‌ನ ನಾಗರಿಕರಿಗೆ 'ಮನೆಯೊಳಗೆ ಇರಿ' ಎಂದು ಶನಿವಾರ ಬೆಳಗಿನ ಜಾವ 3ಕ್ಕೆ ಎಚ್ಚರಿಕೆ ಸಂದೇಶ ಕಳುಹಿಸಿತ್ತು.

'ಎಚ್ಚರಿಕೆ ಸಂದೇಶ ಕಳುಹಿಸಿದ ಅರ್ಧ ಗಂಟೆಯ ಬಳಿಕ ಎಚ್ಚರಿಕೆ ಸಂದೇಶವನ್ನು ವಾಪಸು ಪಡೆಯಲಾಗಿದೆ. ಆದರೆ, ಅಷ್ಟರಲ್ಲಿ ಎರಡು ಸ್ಫೋಟಗಳು ಕೇಳಿಸಿದವು' ಎಂದು ಎಎಫ್‌ಪಿ ಪತ್ರಕರ್ತರೊಬ್ಬರು ಹೇಳಿದರು. ರಿಯಾದ್‌ನ ಹಲವು ವಾಸಿಗಳೂ ಇದನ್ನೇ ಹೇಳಿದ್ದಾರೆ.

'ಹೂಥಿ ಬಂಡುಕೋರರು ಮೆಕ್ಕಾವನ್ನು ಗುರಿಯಾಗಿಸಿ ದಾಳಿ ನಡೆಸಲು ಯೋಜಿಸಿದ್ದಾರೆ' ಎಂದು ಸೌದಿ ಅರೇಬಿಯಾ ಬುಧವಾರವಷ್ಟೇ ಆರೋಪಿಸಿತ್ತು.

'ಸೌದಿ ಅರೇಬಿಯಾವು ಇದನ್ನು ಹಲವು ಬಾರಿ ಹೇಳಿದೆ. ಆದ್ದರಿಂದ, ಇದರಲ್ಲಿ ಸತ್ಯಾಂಶವಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಈ ಸುಳ್ಳನ್ನು ಈಗ ಯಾರೂ ನಂಬುವುದಿಲ್ಲ' ಎಂದು ಬಂಡುಕೋರರು ಪ್ರತಿಕ್ರಿಯಿಸಿದ್ದರು. ಇದಾದ ಎರಡು ದಿನಗಳಲ್ಲಿ ರಿಯಾದ್‌ನಲ್ಲಿ ಈ ಘಟನೆ ನಡೆದಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries