ನವದೆಹಲಿ: ರಷ್ಯಾದ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳಿನ ಪ್ರಮುಖ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರ ಶಾಸ್ತ್ರೀಯ ಕವನ ಸಂಕಲನವಾದ 'ತಿರುಕ್ಕುರಳ್'ನ ರಷ್ಯನ್ ಭಾಷಾಂತರದ ಪ್ರತಿಯನ್ನು ಅವರಿಗೆ ನೀಡಿದ್ದಾರೆ.
ತಿರುವಳ್ಳುವರ್ ಅವರ ಮಹತ್ವಪೂರ್ಣ ಕೃತಿಯಾದ ತಿರುಕ್ಕುರಳ್, ಜ್ಞಾನಶಾಖೆಯ ವಿವಿಧ ವಿಷಯಗಳನ್ನು ಒಳಗೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮಿಳಿನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ಮಹಾನ್ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರ ಜ್ಞಾನವನ್ನು ಭಾಷೆ ಮತ್ತು ಗಡಿಗಳನ್ನು ಮೀರಿ ಸಾಗಿಸುವ 'ತಿರುಕ್ಕುರಳ್'ನ ರಷ್ಯನ್ ಭಾಷಾಂತರವನ್ನು ರಷ್ಯಾದ ಅಧ್ಯಕ್ಷ ಪುಟಿನ್‌ಗೆ ನೀಡಲಾಯಿತು' ಎಂದು ಹೇಳಿದ್ದಾರೆ.
ಪುಟಿನ್ ಭೇಟಿಯ ತಿರುಕ್ಕುರಳ್ ಅನ್ನು ಉಡುಗೊರೆ ನೀಡಿರುವ ಚಿಕ್ಕ ವಿಡಿಯೊವೊಂದನ್ನು ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಬ್ರಿಕ್ಸ್ ಸಮ್ಮೇಳನಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಪುಟಿನ್ ಅವರು ದೆಹಲಿಯ ಭಾರತ ಮಂಟಪದಲ್ಲಿ ನಿನ್ನೆ (ಸೆ.11) ಭೇಟಿಯಾಗಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

