HEALTH TIPS

BRICS summit: ರಷ್ಯಾ ಅಧ್ಯಕ್ಷ ಪುಟಿನ್‌ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ನವದೆಹಲಿ: ಬ್ರಿಕ್ಸ್‌ ಸಮ್ಮೇಳನಕ್ಕೂ ಮುನ್ನ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಸೆ.11) ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 


ಬ್ರಿಕ್ಸ್‌ ಸಮ್ಮೇಳನದಲ್ಲಿ ಭಾಗವಹಿಸಲು, ಪುಟಿನ್ ಅವರು 3 ದಿನಗಳ ಭಾರತ ಭೇಟಿಯಲ್ಲಿದ್ದಾರೆ.  ಸೆ.11ರ ಬೆಳಿಗ್ಗೆ ನವದೆಹಲಿಗೆ ಬಂದಿಳಿದಿದ್ದರು.

2030ರ ವೇಳೆಗೆ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ಏರಿಕೆ ಮಾಡುವುದು, ಇಂಧನ, ರಕ್ಷಣೆ ಮತ್ತು ಖನಿಜಗಳ ವಲಯದಲ್ಲಿನ ಸಹಕಾರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದೊಂದಿಗೆ ಕೈಗಾರಿಕಾ ಸಹಭಾಗಿತ್ವ, ರೈಲ್ವೆ ಮತ್ತು ಟನಲ್ ನಿರ್ಮಾಣದಲ್ಲಿ ಸಹಯೋಗ, ನಾಗರಿಕ ಪರಮಾಣು ಸಹಕಾರ, ರಷ್ಯಾದಲ್ಲಿ ಭಾರತದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಕುರಿತು ಮಾತುಕತೆ ನಡೆದಿವೆ ಎಂದು ಹೇಳಿದ್ದಾರೆ.

ಬ್ರಹ್ಮೋಸ್ ಕ್ಷಿಪಣಿಯನ್ನು ಉನ್ನತೀಕರಿಸುವುದು, ಎಸ್‌-400 ಮತ್ತು ಎಸ್‌ಯು-57 ಯುದ್ಧವಿಮಾನಗಳ ರಫ್ತುವಿನ ಕುರಿತು ಬ್ರಿಕ್ಸ್ ಸಮ್ಮೇಳನದ ವೇಳೆ ಉಭಯ ದೇಶಗಳು ಮಾತುಕತೆ ನಡೆಸಲಿವೆ ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಇತ್ತೀಚೆಗೆ ಹೇಳಿದ್ದರು.

ಕಳೆದ ವಾರ ಬಿಶ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ಮೋದಿ ಮತ್ತು ಪುಟಿನ್ ಅವರು ಮಾತುಕತೆ ನಡೆಸಿದ್ದರು. ಈ ವೇಳೆ ರಷ್ಯಾ-ಉಕ್ರೇನ್‌ ಯುದ್ಧವು ನಿಲ್ಲಬೇಕು ಎಂದು ಮೋದಿ ಹೇಳಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries