HEALTH TIPS

ಡಾಲರ್‌ಗೆ ಪರ್ಯಾಯವಾಗಿ ಬ್ರಿಕ್ಸ್ ಕರೆನ್ಸಿ: ಸ್ಪಷ್ಟ ನಿರ್ಧಾರ ಕೈಗೊಳ್ಳದ ಸಭೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ಗೆ ಪರ್ಯಾಯವಾಗಿ 'ಬ್ರಿಕ್ಸ್ ಕರೆನ್ಸಿ' ಚಲಾವಣೆಗೆ ತರುವ ಬಗ್ಗೆ ಇಲ್ಲಿ ನಡೆದ ಶೃಂಗಸಭೆಯಲ್ಲಿ 'ಬ್ರಿಕ್ಸ್‌' ಸದಸ್ಯ ರಾಷ್ಟ್ರಗಳು ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲಿಲ್ಲ.


'ಬ್ರಿಕ್ಸ್‌' ರಾಷ್ಟ್ರಗಳ ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್‌ ಗವರ್ನರ್‌ಗಳ ಸಭೆಯಲ್ಲಿ 'ಬ್ರಿಕ್ಸ್‌ ಕರೆನ್ಸಿ' ಅಥವಾ ಯುಎಸ್‌ ಡಾಲರ್‌ಗೆ ಪರ್ಯಾಯ ಆಯ್ಕೆಯ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ ಎಂದು ಮೂಲಗಳು ಹೇಳಿವೆ.

ಜಾಗತಿಕ ಮಟ್ಟದಲ್ಲಿ ಡಾಲರ್‌ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ (ಡಾಲರ್‌ ಪ್ರಭಾವ ತಗ್ಗಿಸುವುದು) ಬಗ್ಗೆಯೂ 'ಬ್ರಿಕ್ಸ್‌' ಮುಖಂಡರು ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಿದ್ದಾರೆ.

ವೇಗವಾದ, ಕಡಿಮೆ ವೆಚ್ಚದ, ಪಾರದರ್ಶಕ ಮತ್ತು ಸುರಕ್ಷಿತವಾದ ಪರಸ್ಪರ ಕಾರ್ಯಸಾಧ್ಯತೆಯ ಪಾವತಿ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ. ಗಡಿಯಾಚೆಗಿನ ಹಣಕಾಸು ವಹಿವಾಟು- ಪಾವತಿ ವ್ಯವಸ್ಥೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬ್ರಿಕ್ಸ್‌ ಪಾವತಿ ಕಾರ್ಯಪಡೆ (ಬಿಪಿಟಿಎಫ್‌) ನಡೆಸುತ್ತಿರುವ ಪ್ರಯತ್ನವನ್ನು ಸದಸ್ಯ ರಾಷ್ಟ್ರಗಳು ಶ್ಲಾಘಿಸಿವೆ.

ಶುಕ್ರವಾರ ನವದೆಹಲಿಯಲ್ಲಿ ನಡೆದ 'ಬ್ರಿಕ್ಸ್‌' ವ್ಯಾಪಾರ ವೇದಿಕೆ ಸಭೆಯಲ್ಲಿ ಮಾತನಾಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್‌ ಅವರು, ಪರೋಕ್ಷವಾಗಿ ಡಾಲರ್‌ ಪ್ರಭಾವ ತಗ್ಗಿಸುವ ಅಗತ್ಯವನ್ನು ಪ್ರತಿಪಾದಿಸಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries