ಮುಳ್ಳೇರಿಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾಸರಗೋಡು, ಕಾರಡ್ಕ ವಲಯದ ಕಿನ್ನಿ0ಗಾರ್ ಕಾರ್ಯಕ್ಷೇತ್ರದ ಅನ್ನಪೂರ್ಣೇಶ್ವರಿ ಸಂಘದ 14 ನೇ ವರ್ಷದ ವಾರ್ಷಿಕೋತ್ಸವವನ್ನು ಮದಕ ಶಾಲೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕಿನ ಯೋಜನಾಧಿಕಾರಿ ಇಂದಿನ ಕಾರ್ಯಕ್ರಮ ಕೇವಲ ಸಂಘದ ಸದಸ್ಯರಿಗಷ್ಟೇ ಸೀಮಿತವಾಗಿರದೆ ತಮ್ಮ ಮನೆಯವರೆಲ್ಲ ಭಾಗವಹಿಸಿ ಒಂದು ಕುಟುಂಬದ ಕಾರ್ಯಕ್ರಮದಂತೆ ಭಾಸವಾಯಿತೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಸಂಘದ ಪ್ರತೀ ಸದಸ್ಯರು ಕೇವಲ ಸಾಲಕ್ಕಾಗಿ ಮಾತ್ರ ಸಂಘವನ್ನು ಬಳಸಿಕೊಳ್ಳದೆ ತಮ್ಮ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿ ಆಗಿರುವುದರ ಬಗ್ಗೆ ತಮ್ಮ ಮಾತಿನಲ್ಲಿ ತಿಳಿಸಿದರು.
ಸರೋಜಿನಿ ಅಧ್ಯಕ್ಷತೆ ವಹಿಸಿದ್ದರು. ವಲಯ ಮೇಲ್ವಿಚಾರಕ ಸುರೇಶ್, ಸೇವಾಪ್ರತಿನಿಧಿ ಶಶಿಕಲಾ, ಗ್ರಾಮ ಸೇವಾದಾರ ಸುಶ್ಮಿತಾ ಹಾಗೂ ಕಾಯರ್ಪದವು ಒಕ್ಕೂಟ ಅಧ್ಯಕ್ಷೆ ಜಯಶ್ರೀ ಉಪಸ್ಥಿತರಿದ್ದರು. ಸವಿತಾ ಸಂಘದ ವರದಿ ವಾಚಿಸಿದರು. ವೇದಾವತಿ ಸ್ವಾಗತಿಸಿ, ವನಜ ವಂದಿಸಿದರು. ಶಾಂತಿ ನಿರೂಪಿಸಿದರು.

.jpg)
