ನವದೆಹಲಿ (PTI): ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ನೂತನ ಕಚೇರಿಯ ಭದ್ರತೆಯ ಜವಾಬ್ದಾರಿಯನ್ನು ಕೇಂದ್ರ ಕೈಗಾರಿಕೆ ಭದ್ರತಾ ಪಡೆ (ಸಿಐಎಸ್‌ಎಫ್) ವಹಿಸಿಕೊಂಡಿದೆ.
'ಸಿಐಎಸ್‌ಎಫ್‌ನ ಒಟ್ಟು 39 ಯೋಧರನ್ನು ಕಚೇರಿಗೆ ನಿಯೋಜಿಸಲಾಗಿದೆ. ಕಚೇರಿಯ ಗೋಪ್ಯ ಸ್ಥಳದ ಒಳಗೆ ಮತ್ತು ಹೊರಗೆ ಹೋಗುವವರ ತಪಾಸಣೆ ಸೇರಿದಂತೆ ಸಂಪೂರ್ಣ ಭದ್ರತಾ ಕಾರ್ಯವನ್ನು ಅವರು ನಿರ್ವಹಿಸಲಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ದೇಶದಾದ್ಯಂತ ಬೃಹತ್ ಪ್ರತಿಭಟನೆಗೆ ನಡೆದಿತ್ತು. ಬಳಿಕ, ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ.
2017ರಲ್ಲಿ ರಚನೆಯಾಗಿರುವ ಎನ್‌ಟಿಎ ಓಕ್ಲಾದಲ್ಲಿರುವ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇತ್ತೀಚೆಗೆ, ನವದೆಹಲಿಯ ಮಿಂಟೊ ರಸ್ತೆಲ್ಲಿರುವ ಕೇಂದ್ರ ಸರ್ಕಾರದ ಮುದ್ರಣಾಲಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ, 'ಮೂವರು ವಿಷಯ ತಜ್ಞರನ್ನು ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಾಥಮಿಕ ಮೂಲಗಳು ಎಂದು ಪತ್ತೆಹಚ್ಚಲಾಗಿದೆ. ತಜ್ಞರು ಎನ್‌ಟಿಎ ಕಚೇರಿಯ ಗೋಪ್ಯ ಸ್ಥಳಗಳಿಗೆ ಪ್ರವೇಶಿಸುವಾಗ ಅಥವಾ ಹೊರಬರುವಾಗ ಯಾವುದೇ ಪರಿಶೀಲನೆ ನಡೆಸಲಾಗುತ್ತಿರಲಿಲ್ಲ' ಎಂದು ಉಲ್ಲೇಖಿಸಲಾಗಿತ್ತು.

