ಕಾಸರಗೋಡು: ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ವತಿಯಿಂದ ನೀಡಲಾಗುವ ಸಾಂಪ್ರದಾಯಿಕ ಮಣ್ಣಿನ ಪಾತ್ರೆ ನಿರ್ಮಣ ಕಾರ್ಮಿಕರ ಧನಸಹಾಯ ಯೋಜನೆ-2026-27ರನ್ವಯ ಅರ್ಜಿ ಸಲ್ಲಿಸುವ ದಿನಾಂಕವನ್ನು 2026ರ ಸೆಪ್ಟೆಂಬರ್ 20 ರವರೆಗೆ ವಿಸ್ತರಿಸಲಾಗಿದೆ.
ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ. ಮೀರದ, 2026ರ ಆಗಸ್ಟ್ 1ರಂದು 60 ವರ್ಷ ವಯಸ್ಸು ಮೀರಿರದ ಹಾಗೂ ಮಣ್ಣಿನ ಪಾತ್ರೆ ತಯಾರಿಕೆಯನ್ನು ಕುಲವೃತ್ತಿಯಾಗಿ ಮಾಡಿಕೊಂಡಿರುವ ರಾಜ್ಯದ ಒಬಿಸಿ ಸಮುದಾಯಕ್ಕೆ ಸೇರಿದವರು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಯೋಜನೆಯನ್ವಯ ಹಿಂದಿನ ವರ್ಷಗಳಲ್ಲಿ ಧನಸಹಾಯ ಪಡೆದಿರುವವರು ಹಾಗೂ ಅವರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು www.bwin.kerala.gov.in ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಯೋಜನೆಯ ಅರ್ಹತಾ ಮಾನದಂಡಗಳು ಹಾಗೂ ಇತರ ವಿವರಗಳನ್ನು ಪೆÇೀರ್ಟಲ್‍ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0495 2377786) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

