ಕಾಸರಗೋಡು: ಕರಾವಳಿ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಅನುಮೋದಿಸಿರುವ ಕಾಸರಗೋಡು ತಳಂಗರೆಯ ಕರಾವಳಿ ಪೆÇಲೀಸ್ ಠಾಣೆಯ ಬೋಟ್‍ನಲ್ಲಿ ಬೋಟ್ ಚಾಲಕ (ಇನ್‍ಲ್ಯಾಂಡ್), ಬೋಟ್‍ಮ್ಯಾನ್ (ಇನ್‍ಲ್ಯಾಂಡ್), ಬೋಟ್ ಲಾಸ್ಕರ್ (ಇನ್‍ಲ್ಯಾಂಡ್), ಸ್ಪೆಷಲ್ ಮೆರೈನ್ ಹೋಮ್ ಗಾರ್ಡ್ ಮುಂತಾದ ಹುದ್ದೆಗಳಿಗೆ ಸಿಬ್ಬಂದಿಯನ್ನು ತಾತ್ಕಾಲಿಕ ಹಾಗೂ ದಿನಗೂಲಿ ಆಧಾರದಲ್ಲಿ ನೇಮಕ ಮಾಡಲಾಗುವುದು.
ಸೆಪ್ಟೆಂಬರ್ 9 ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ತಳಂಗರೆ ಕರಾವಳಿ ಪೆÇಲೀಸ್ ಠಾಣೆಯಲ್ಲಿ ಸಂದರ್ಶನ ನಡೆಸಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 255461)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

