HEALTH TIPS

ಕೌಟುಂಬಿಕ ವಿವಾದದಲ್ಲಿ ಮಧ್ಯಸ್ಥಿಕೆ ಸಂತ್ರಸ್ತ ಮಹಿಳೆಗೆ ತೊಂದರೆಯನ್ನು ಹೆಚ್ಚಿಸುತ್ತದೆ : ನ್ಯಾ.ನಾಗರತ್ನಾ

ಗುವಾಹಟಿ: ಕುಟುಂಬ ಕಲಹಗಳಲ್ಲಿ ಹಿಂಸಾಚಾರ, ಬಲವಂತದ ನಿಯಂತ್ರಣ ಅಥವಾ ಗಂಭೀರವಾದ ಅಧಿಕಾರದ ಅಸಮತೋಲನಕ್ಕೆ ಒಳಗಾಗಿರುವ ಮಹಿಳೆಯರನ್ನು ರಾಜಿ ಪಂಚಾಯ್ತಿ ಅಥವಾ ಮಧ್ಯಸ್ಥಿಕೆಯು ಮತ್ತಷ್ಟು ಆಘಾತವನ್ನುಂಟು ಮಾಡಬಹುದು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಸರ್ವೋಚ್ಚ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯದ ವ್ಯವಹಾರಗಳ ಸಮಿತಿಯ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಧ್ಯಸ್ಥಿಕೆಯು ನ್ಯಾಯನಿರ್ಣಯಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ ಮತ್ತು ಮಹಿಳೆಯೊಬ್ಬರ ಮಾತುಕತೆಗೊಪ್ಪುವ ಅಥವಾ ರಾಜಿ ಮಾಡಿಕೊಳ್ಳುವ ನಿಲುವು ಅವರ ಕಾನೂನುಬದ್ಧ ಹಕ್ಕಿನಷ್ಟೇ ಮೌಲಿಕವಾದುದು ಎಂದು ಹೇಳಿದರು.

ಕುಟುಂಬ ವಿವಾದಗಳಲ್ಲಿ ಪರ್ಯಾಯ ವಿವಾದ ಪರಿಹಾರ ಮತ್ತು ನ್ಯಾಯದಾನದ ಕುರಿತು ಮಾತನಾಡಿದ ಅವರು, ಮಧ್ಯಸ್ಥಿಕೆಯು ವೇಗ, ಗೋಪ್ಯತೆ ಮತ್ತು ಖಾಸಗಿತನವನ್ನು ಒದಗಿಸುತ್ತದೆ. ಮಹಿಳೆಯರು ಸ್ತ್ರೀಧನದ ವಾಪಸಾತಿ, ಮಕ್ಕಳ ವಿದ್ಯಾಭ್ಯಾಸ ಮತ್ತು ಕಂತುಗಳ ಬದಲು ಒಟ್ಟು ಮೊತ್ತದ ಪಾವತಿಯ ಬಗ್ಗೆ ನಿರ್ಧಾರಗಳಿಗೆ ಬರಲು ಇದು ಸಹಾಯ ಮಾಡುತ್ತದೆ. ಆದರೆ, ಮಹಿಳೆಯರು ಹಿಂಸಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾದ ಸಂದರ್ಭಗಳಲ್ಲಿ ಇವುಗಳಲ್ಲಿ ಯಾವುದೂ ಅನ್ವಯಿಸುವುದಿಲ್ಲ. ಅಲ್ಲಿ ಹಿಂಸಾಚಾರ ಅಥವಾ ಅಧಿಕಾರದ ಅಸಮತೋಲನ ಇರುವಾಗ ಮಧ್ಯಸ್ಥಿಕೆಯು ಸೂಕ್ತವಲ್ಲ, ಅದು ಸಂಭಾವ್ಯವಾಗಿ ಹಾನಿಕಾರಕ ಅಥವಾ ಅಪಾಯಕಾರಿಯೂ ಆಗಬಹುದು ಮತ್ತು ಇನ್ನಷ್ಟು ಆಘಾತಕ್ಕೆ ಕಾರಣವಾಗಬಹುದು ಎಂದು ಒತ್ತಿಹೇಳಿದರು.

ಕೌಟುಂಬಿಕ ನ್ಯಾಯಾಯಗಳು ಎಂದಿಗೂ ದ್ವೇಷಪೂರಿತ ಕ್ರಮವನ್ನು ಉತ್ತೇಜಿಸುವ ಜಾಗಗಳಾಗಿರಲಿಲ್ಲ, ಆದರೆ ಈಗ ಅವು ಬೇರೆ ಹೆಸರಿನಲ್ಲಿ ಸಿವಿಲ್ ನ್ಯಾಯಾಲಯಗಳಂತೆ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಮಕ್ಕಳ ಪಾಲನಾ ಹಕ್ಕು ಮತ್ತು ಭೇಟಿ ಹಕ್ಕುಗಳ ಮಧ್ಯಸ್ಥಿಕೆಯಲ್ಲಿ, ಕೇವಲ ಕಸ್ಟಡಿ ಆದೇಶವನ್ನು ಪಡೆಯುವುದರ ಮೇಲೆ ಗಮನಹರಿಸದೆ ಮಧ್ಯಸ್ಥಿಕೆಯ ಮೂಲಕ ಪಾಲನಾ ಯೋಜನೆಯನ್ನು ಒಪ್ಪಿಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದ ಅವರು, ಈ ಗುರಿಯನ್ನು ಸಾಧಿಸಲು ಅರ್ಹ ಮಕ್ಕಳ ಮನಶ್ಶಾಸ್ತ್ರಜ್ಞರನ್ನು ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿಸಬೇಕು ಎಂದು ಸೂಚಿಸಿದರು.

ಮಧ್ಯಸ್ಥಿಕೆಗೆ ಮರಳಿ ಪುನರ್‌ಪರಿಶೀಲಿಸಬಹುದಾದ ಪಾಲನಾ ಯೋಜನೆಯನ್ನು ರೂಪಿಸಬೇಕು. ಮಗುವಿನ ಹಿತವು ಹೆತ್ತವರ ಹಕ್ಕುಗಳಿಗಿಂತ ಹೆಚ್ಚಿನದು. ಇದನ್ನು ಖಚಿತಪಡಿಸಿಕೊಳ್ಳಲು, ದೇಶಾದ್ಯಂತ ಇರುವ ಸುಮಾರು 820 ಕೌಟುಂಬಿಕ ನ್ಯಾಯಾಲಯಗಳಿಗೆ ಕಾಯಂ ಸಮಾಲೋಚನೆ ಮತ್ತು ಮಧ್ಯಸ್ಥಿಕೆ ಘಟಕವನ್ನು ಒದಗಿಸಬೇಕು ಹಾಗೂ ತಂತ್ರಜ್ಞಾನವನ್ನು ಬಳಸಿ ಆನ್‌ಲೈನ್ ಮಧ್ಯಸ್ಥಿಕೆ ಮತ್ತು ದೂರಸ್ಥ ವಿಚಾರಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries