HEALTH TIPS

CCTV ಕಣ್ಗಾವಲಿಗೇ ಶಾಕ್; AI ಕ್ಯಾಮರಾ ಗುರುತಿಸಲು ಸಾಧ್ಯವಾಗದ ಶರ್ಟ್ ತಯಾರಿಸಿದ ಜರ್ಮನ್ ವಿನ್ಯಾಸಕ

ಜರ್ಮನ್ ವಿನ್ಯಾಸಕ ಸೈಮನ್ ವೆಕರ್ಟ್ AI-ಚಾಲಿತ ವೀಡಿಯೊ ಕಣ್ಗಾವಲು ವ್ಯವಸ್ಥೆಗಳನ್ನು ಗೊಂದಲಗೊಳಿಸಲು 'ಡಿಜಿಟಲ್ ಕ್ಯಾಮೌಫ್ಲೇಜ್' ಎಂಬ ವರ್ಣರಂಜಿತ ಶರ್ಟ್ ವಿನ್ಯಾಸಗೊಳಿಸಿದ್ದಾರೆ. 


AI ಕ್ಯಾಮರಾಗಳಿಗೆ ಕಾಣದಂತಹ ಶರ್ಟ್ ಗಳನ್ನು ಧರಿಸಲು ಸಾಧ್ಯವೆ? ಜರ್ಮನ್ ವಿನ್ಯಾಸಕ ಸೈಮನ್ ವೆಕರ್ಟ್ ಅಂತಹ ಒಂದು ವಿಶಿಷ್ಟ ಶರ್ಟ್ನ್ನು ಅನ್ವೇಷಿಸುತ್ತಿದ್ದಾರೆ.

ಅವರು 'ಡಿಜಿಟಲ್ ಕ್ಯಾಮೌಫ್ಲೇಜ್' ಎಂಬ ವರ್ಣರಂಜಿತ ಬಟನ್-ಡೌನ್ ಶರ್ಟ್ ವಿನ್ಯಾಸಗೊಳಿಸಿದ್ದಾರೆ. ಈ ಶರ್ಟ್ ಅನ್ನು AI-ಚಾಲಿತ ವೀಡಿಯೊ ಕಣ್ಗಾವಲು ವ್ಯವಸ್ಥೆಗಳನ್ನು ಗೊಂದಲಗೊಳಿಸಲು ವಿನ್ಯಾಸಗೊಳಿಸಲಾಗಿದೆ.

ಮೊದಲ ನೋಟದಲ್ಲಿ ಶರ್ಟ್ ಪ್ರಕಾಶಮಾನವಾದ ಹಸಿರು, ಗುಲಾಬಿ ಮತ್ತು ಕಿತ್ತಳೆ ಬಣ್ಣದ ಆಕಾರಗಳಿರುವ ಅಮೂರ್ತ ಬಟ್ಟೆಯಂತೆ ಕಾಣುತ್ತದೆ. ಆದರೆ ಅದರ ಅಸಾಮಾನ್ಯ ಮಾದರಿಯು ಹೆಚ್ಚು ನಿರ್ದಿಷ್ಟ ಉದ್ದೇಶವನ್ನು ಹೊಂದಿದೆ. ಇದು AI ಕಣ್ಗಾವಲು ವ್ಯವಸ್ಥೆಗಳು ಮನುಷ್ಯರನ್ನು ಪತ್ತೆಹಚ್ಚುವ ವಿಧಾನಕ್ಕೆ ಅಡ್ಡಿಪಡಿಸಬಹುದು. ಅಂದರೆ, AI ಗೆ ಗೊಂದಲ ಮೂಡಿಸಬಹುದು.

ವೆಕರ್ಟ್ ಹಂಚಿಕೊಂಡ ಒಂದು ವಿವರಣೆಯಲ್ಲಿ, ಚಿತ್ರ ಗುರುತಿಸುವಿಕೆ ವ್ಯವಸ್ಥೆಯು ವ್ಯಕ್ತಿಯ ಸುತ್ತಲೂ ಹಸಿರು ಆವರಣವನ್ನು ಇರಿಸಿ, ಅವರನ್ನು 'ವ್ಯಕ್ತಿ' ಎಂದು ಉಲ್ಲೇಖ ಮಾಡುವ ಮೂಲಕ ಗುರುತಿಸುತ್ತದೆ. ವೆಕರ್ಟ್ ಶರ್ಟ್ ಧರಿಸಿ ಕ್ಯಾಮರಾ ಮುಂದೆ ಬಂದಾಗ ಆವರಣ ಮತ್ತು ಲೇಬಲ್ ಕಣ್ಮರೆಯಾಗುತ್ತದೆ. ಶರ್ಟ್‌ ನಿಂದ ದೂರ ಸರಿದಾಗ ವ್ಯವಸ್ಥೆಯು ಮತ್ತೆ ವ್ಯಕ್ತಿಯನ್ನು ಗುರುತಿಸುತ್ತದೆ.

►AI ಅನ್ನು ವಂಚಿಸಲು ಶರ್ಟ್ ಧರಿಸುವುದೇಕೆ?

ಇತ್ತೀಚೆಗೆ ಜರ್ಮನಿಯ ಬರ್ಲಿನ್ನಂತಹ ನಗರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಮತ್ತು ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು AI-ಚಾಲಿತ ವಸ್ತು-ಗುರುತಿಸುವಿಕೆ ಕ್ಯಾಮರಾಗಳನ್ನು ನಿಯೋಜಿಸಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ, ಈ AI CCTV ಕ್ಯಾಮರಾಗಳನ್ನು ವಂಚಿಸುವಂತಹ ವಿನ್ಯಾಸವನ್ನು ತಯಾರಿಸಲು ವೆಕರ್ಟ್ ನಿರ್ಧರಿಸಿದರು.

►ಶರ್ಟ್ AI ಅನ್ನು ವಂಚಿಸುವುದು ಹೇಗೆ?

AI ಜನರನ್ನು ಹೇಗೆ ನೋಡುತ್ತದೆ ಎಂಬುದರ ಮೇಲೆ ಈ ತಂತ್ರ ಸಿದ್ಧಪಡಿಸಲಾಗಿದೆ. ಮನುಷ್ಯರಿಗಿಂತ ಭಿನ್ನವಾಗಿ, AI ದೃಷ್ಟಿ ವ್ಯವಸ್ಥೆಗಳು ಒಬ್ಬ ವ್ಯಕ್ತಿ ಹೇಗೆ ಕಾಣುತ್ತಾನೆ ಎಂಬುದನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವುದಿಲ್ಲ. ಅವು ಲಕ್ಷಾಂತರ ಚಿತ್ರಗಳಿಂದ ಮಾದರಿಗಳನ್ನು ಗುರುತಿಸಲು ಕಲಿಯುತ್ತವೆ. ಹೀಗಾಗಿ, ಕ್ಯಾಮರಾ ವ್ಯಕ್ತಿಯನ್ನು ನೋಡಿದಾಗ AI ದೇಹದ ಆಕಾರ, ಅಂಚುಗಳು, ಬಣ್ಣಗಳು ಮತ್ತು ಟೆಕ್ಸ್ಚರ್ ಗಳಂತಹ ಪರಿಚಿತ ದೃಶ್ಯಗಳ ಸುಳಿವುಗಳನ್ನು ಹುಡುಕುತ್ತದೆ.

ಆದರೆ 'ಡಿಜಿಟಲ್ ಕ್ಯಾಮೌಫ್ಲೇಜ್'ನೊಂದಿಗೆ ತಯಾರಿಸಲಾದ ಶರ್ಟ್ AI ಅನ್ನು ಮೋಸಗೊಳಿಸುತ್ತದೆ. ಶರ್ಟ್ ನ ಪ್ರಕಾಶಮಾನವಾದ ಬಣ್ಣ ಬದಲಾವಣೆಗಳು ಮತ್ತು ಅತಿಕ್ರಮಿಸುವ (overlapping) ಆಕಾರಗಳನ್ನು ಬಳಸುತ್ತದೆ. ಹೀಗಾಗಿ, ಈ ರಚನೆಯು ದೃಶ್ಯದ ಸುಳಿವುಗಳಿಗೆ ಅಡ್ಡಿಪಡಿಸುತ್ತದೆ. ಬಣ್ಣಗಳು AI ಗಮನವನ್ನು ಸೆಳೆಯಬಹುದು. ಆದರೆ ಆಕಾರಗಳು ದೇಹದ ಬಾಹ್ಯರೇಖೆಯನ್ನು (ಆವರಣ) ಮುರಿಯುತ್ತವೆ. ಹೀಗಾಗಿ, AI ವ್ಯವಸ್ಥೆಗೆ ವ್ಯಕ್ತಿಯನ್ನು ನೋಡುತ್ತಿದೆ ಎಂದು ನಿರ್ಧರಿಸಲು ಕಷ್ಟವಾಗುತ್ತದೆ.

ಸರಳವಾಗಿ ಹೇಳುವುದಾದರೆ, AI ಒಬ್ಬ ವ್ಯಕ್ತಿಯನ್ನು ನೋಡುತ್ತಿದೆಯೇ ಎಂದು ದೃಶ್ಯ ಸುಳಿವುಗಳನ್ನು ಹುಡುಕುತ್ತದೆ. ಆದರೆ ಶರ್ಟ್ ಆ ಸುಳಿವುಗಳನ್ನು ಬಣ್ಣಗಳು ಮತ್ತು ಮಾದರಿಗಳೊಂದಿಗೆ ತುಂಬಿಸುತ್ತದೆ. ಹೀಗಾಗಿ, ವ್ಯಕ್ತಿ ಎಂದು ಗುರುತಿಸುವುದು AI ಗೆ ಕಷ್ಟವಾಗುತ್ತದೆ.

►AI ನೆರವಿನಿಂದಲೇ ತಯಾರಿಸಿದ ಶರ್ಟ್

ವೆಕರ್ಟ್ ಈ ಶರ್ಟ್ನ್ನು ತಯಾರಿಸಲು AI ನೆರವನ್ನೇ ತೆಗೆದುಕೊಂಡಿದ್ದಾರೆ. AI ನೆರವಿನಿಂದಲೇ ಅವರು ವಿನ್ಯಾಸವನ್ನು ರಚಿಸುವುದು ಮತ್ತು ಸುಧಾರಿಸುವುದು ಸಾಧ್ಯವಾಗಿದೆ. ನೈಜ ಜಗತ್ತಿನಲ್ಲಿ ವಸ್ತುಗಳನ್ನು ಪತ್ತೆಹಚ್ಚಬಲ್ಲ ಕಣ್ಗಾವಲು ವ್ಯವಸ್ಥೆಗಳಲ್ಲಿ ಬಳಸುವ ತಂತ್ರಜ್ಞಾನಕ್ಕೆ ಹೋಲುವ, ಓಪನ್-ಸೋರ್ಸ್ AI ವ್ಯವಸ್ಥೆಯಾದ YOLO ವಿರುದ್ಧ 'ಡಿಜಿಟಲ್ ಕ್ಯಾಮೌಫ್ಲೇಜ್' ಅನ್ನು ವೆಕರ್ಟ್ ಪರೀಕ್ಷಿಸಿದ್ದಾರೆ.

ವೆಕರ್ಟ್ ಅವರ ಪ್ರಯತ್ನವು ಇಂತಹ ಉಡುಪು ತಯಾರಿಸುವವರ ವ್ಯಾಪಕ ಚಳವಳಿಯ ಭಾಗವಾಗಿದೆ. ಕಂಪ್ಯೂಟರ್ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದಾದ ವಿನ್ಯಾಸ ರಚನೆಯ ಪ್ರಯತ್ನ ವಿಶಾಲ ಮಟ್ಟದಲ್ಲಿ ನಡೆಯುತ್ತಿದೆ. ಇಂತಹುದೇ ಪ್ರಯೋಗಗಳು ಬೇರೆಡೆಗಳಲ್ಲೂ ನಡೆದಿವೆ. ಹಾಗೆಂದು ವೆಕರ್ಟ್ ತಮ್ಮ ಶರ್ಟ್ ಪ್ರತಿ CCTV ಕ್ಯಾಮರಾವನ್ನು ಸೋಲಿಸಬಹುದು ಎಂದು ಹೇಳುತ್ತಿಲ್ಲ. ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, AI ವಿಷನ್ ತಂತ್ರಜ್ಞಾನದ ದೌರ್ಬಲ್ಯವನ್ನು ಬಹಿರಂಗಪಡಿಸುವುದು ತಮ್ಮ ಉದ್ದೇಶ ಎಂದು ಅವರು ಹೇಳುತ್ತಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries