HEALTH TIPS

ಪತ್ನಿ ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ 12 ಬಾರಿ ಇರಿದ ಜಿಮ್‌ ಟ್ರೈನರ್‌; ಭೀಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

 ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರ, ಜಿಮ್ ತರಬೇತುದಾರನೊಂದಿಗೆ ಸೇರಿ, ಪತಿಯ ಹತ್ಯೆಗೆ ಯತ್ನಿಸಿದ್ದು, ಭೀಕರ ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. 


ಅಕ್ಟೋಬರ್ 26ರ ಬೆಳಗ್ಗೆ, ವಸುಂಧರದಲ್ಲಿರುವ ತಮ್ಮ ಬಾಡಿಗೆ ಮನೆಯಿಂದ ಪತ್ನಿ ಪ್ರಿಯಾ ಶರ್ಮಾ ಹೊರಹೋದ ಕೆಲವೇ ನಿಮಿಷಗಳಲ್ಲಿ, ಆಕೆಯ ಪತಿ ಶಶಾಂಕ್ ಕಂತಾರಿಯಾ ಅವರ ಮೇಲೆ ಜಿಮ್‌ ಟ್ರೈನರ್‌ ಪ್ರತಾಪ್ ಸಿಂಗ್, ಕನಿಷ್ಠ 12 ಬಾರಿ ಚಾಕುವಿನಿಂದ ಇರಿದಿದ್ದಾನೆ

ಶಶಾಂಕ್ ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಪ್ರಿಯಾ ಮತ್ತು ಪ್ರತಾಪ್ ಇಬ್ಬರನ್ನೂ ಬಂಧಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳ ಪೈಕಿ ಒಂದರಲ್ಲಿ, ಅಕ್ಟೋಬರ್ 26ರ ಬೆಳಗ್ಗೆ 5:17ಕ್ಕೆ ಪ್ರಿಯಾ ಅವರು ವಸುಂಧರಾ ಸೆಕ್ಟರ್-1ರಲ್ಲಿರುವ 'ಜಾಗೃತಿ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ​​ಸೊಸೈಟಿ'ಯ ತಮ್ಮ ಮನೆಯಿಂದ ಹೊರಹೋಗುತ್ತಿರುವುದು ಕಂಡುಬಂದಿದೆ. ಅವರು ತಮ್ಮ ಕಾರಿನಲ್ಲಿ ಹೊರಗೆ ಹೋಗುತ್ತಿರುವುದು ದೃಶ್ಯಗಳಲ್ಲಿ ದಾಖಲಾಗಿದೆ.

ಶಶಾಂಕ್‌ ಪತ್ನಿ ಪ್ರಿಯಾ (32) ಹಾಗೂ ಜಿಮ್‌ ಟ್ರೈನರ್‌ ಪ್ರತಾಪ್‌ ಸಿಂಗ್‌ (30) ನಡುವೆ ಅಕ್ರಮ ಸಂಬಂಧವಿತ್ತು. ಕಳೆದ ಸೆಪ್ಟೆಂಬರ್‌ ಅಂತ್ಯದಲ್ಲಿ ಈ ವಿಚಾರ ತಿಳಿದ ಶಶಾಂಕ್‌, ಪತ್ನಿಯನ್ನು ಪ್ರಶ್ನಿಸಿ ಸಂಬಂಧ ಕಡಿದುಕೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ, ಕುಟುಂಬ ಸಮೇತ ದೆಹಲಿಗೆ ಸ್ಥಳಾಂತರಗೊಳ್ಳಲು ಮನೆ ಹುಡುಕುತ್ತಿದ್ದರು. ಈ ವಿಚಾರವನ್ನು ಪ್ರಿಯಾ, ಪತಾಪ್ ಗೆ ತಿಳಿಸಿದ್ದರು.

ಸೋಮವಾರ ಬೆಳಗ್ಗೆ ಪ್ರಿಯಾ ಜಿಮ್‌ಗೆ ತೆರಳಿದ ಸಂದರ್ಭದಲ್ಲಿ ಮನೆಯ ಬಾಗಿಲು ತೆರೆದಿದ್ದರಿಂದ ಪ್ರತಾಪ್‌ ಒಳನುಗ್ಗಿದ್ದಾನೆ. ಮಲಗಿದ್ದ ಶಶಾಂಕ್‌ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಎಚ್ಚರಗೊಂಡ ಶಶಾಂಕ್‌ ಕೂಗಿಕೊಂಡಿದ್ದು, ಅವರ ಪುಟ್ಟ ಮಗಳ ಅಳುವಿನ ಸದ್ದು ಕೇಳಿ ನೆರೆಹೊರೆಯವರು ಧಾವಿಸಿದ್ದಾರೆ. ಸದ್ಯ ಮಗಳಿಗೆ ಯಾವುದೇ ಗಾಯಗಳಾಗಿಲ್ಲ.

ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಬಳಿಯಿಂದ 2 ಚೂರಿಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಶಾಂಕ್‌ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಿಯಾ ಮತ್ತು ಪ್ರತಾಪ್‌ ವಿರುದ್ಧ ಕೊಲೆ ಯತ್ನ, ಹಲ್ಲೆ ಉದ್ದೇಶದಿಂದ ಮನೆ ಅತಿಕ್ರಮಣ ಪ್ರವೇಶ ಹಾಗೂ ಕ್ರಿಮಿನಲ್‌ ಸಂಚು ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಮಂಗಳವಾರ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 


🚨A Sensational Incident from #Ghaziabad (#UttarPradesh) wife Priya plots her husband Shashank's murder with gym trainer lover Pratap Singh after he discovers their affair. The trainer stabbed the 35-year-old man multiple times while he was sleeping beside their 4-year-old Show more




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries