HEALTH TIPS

ಟ್ರೋಲ್ ಮಾಡುವುದನ್ನು ಬಿಟ್ಟು, ಬೆಲೆ ಏರಿಕೆ ನಿಯಂತ್ರಿಸಿ: ಮೋದಿಗೆ ಕಾಂಗ್ರೆಸ್

ನವದೆಹಲಿ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನ ಪರಿಷತ್ (ಎಂಎಲ್‌ಸಿ) ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಮಾಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಂಗ್ಯವಾಡಿದ್ದರು. ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.


'ಮೋದಿ ಅವರು ಇತರರನ್ನು ಟ್ರೋಲ್ ಮಾಡುವುದು ಮತ್ತು ಉಪದೇಶ ನೀಡುವುದನ್ನು ನಿಲ್ಲಿಸಬೇಕು. 

ಬದಲಾಗಿ, ಹಣದುಬ್ಬರ ಹಾಗೂ ಖಾಸಗಿ ಹೂಡಿಕೆಯ ಕೊರತೆಯನ್ನು ನಿಭಾಯಿಸುವತ್ತ ಗಮನಹರಿಸಬೇಕು' ಎಂದು ಕಾಂಗ್ರೆಸ್ ಕುಟುಕಿದೆ.

ವಾರಾಣಸಿ ಮತ್ತು ನಾಗಪುರದಿಂದ ಹಿಡಿದು ಲಖನೌ, ಪ್ರಯಾಗ್‌ರಾಜ್ ಹಾಗೂ ಪಟ್ನಾದವರೆಗೆ ಜನರು ಮೋದಿ ಅವರ ನೀತಿಗಳ ವಿರುದ್ಧ ಸ್ಪಷ್ಟವಾಗಿ ಅವಿಶ್ವಾಸ ನಿರ್ಣಯ ಪಾಸ್ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ವ್ಯಂಗ್ಯವಾಡಿದ್ದಾರೆ.

'ಪ್ರಧಾನಿ ಮೋದಿ ಅವರು ಆತ್ಮಾವಲೋಕನ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆಯವರಿಗೆ ಉಪದೇಶ ನೀಡುತ್ತಿದ್ದಾರೆ. ಕಾಂಗ್ರೆಸ್ ಪಡೆದ ಸೀಟುಗಳನ್ನು ಎಣಿಸುವ ಮೊದಲು, ತಮ್ಮದೇ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಬಿಜೆಪಿ ಏಕೆ ಎರಡೂ ಸ್ಥಾನಗಳನ್ನು ಕಳೆದುಕೊಂಡಿತು ಮತ್ತು ಆರ್‌ಎಸ್‌ಎಸ್ ಭದ್ರಕೋಟೆಯಾದ ನಾಗಪುರದಲ್ಲಿ ಕಾಂಗ್ರೆಸ್ ಹೇಗೆ ಬಿಜೆಪಿಯನ್ನು ಸೋಲಿಸಿತು ಎಂಬುದರ ಬಗ್ಗೆ ಮೋದಿ ಯೋಚಿಸಲಿ' ಎಂದು ರಮೇಶ್ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಮೋದಿ ಅವರೇ, ಟ್ರೋಲ್ ಮಾಡುವುದನ್ನು ನಿಲ್ಲಿಸಿ. ಕೋಟ್ಯಂತರ ಕುಟುಂಬಗಳು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿವೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಖಾಸಗಿ ಹೂಡಿಕೆ ತಟಸ್ಥಗೊಂಡಿದೆ. ಅಹಂಕಾರವನ್ನು ಬದಿಗೊತ್ತಿ ಈ ನೈಜ ಸವಾಲುಗಳ ಬಗ್ಗೆ ಯೋಚಿಸಿ' ಎಂದು ರಮೇಶ್ ಗುಡುಗಿದ್ದಾರೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries