HEALTH TIPS

ಪ್ರವಾಹ ಶೋಧ ಕಾರ್ಯ ಅಂತ್ಯಗೊಳಿಸಿದ ನೇಪಾಳ: 189 ಮಂದಿ ಭಾರತೀಯರು ಸೇರಿದಂತೆ 5,000ಕ್ಕೂ ಹೆಚ್ಚು ಮಂದಿ ಈಗಲೂ ನಾಪತ್ತೆ

ಕಠ್ಮಂಡು: ಆಗಸ್ಟ್ 26ರಂದು ಸಂಭವಿಸಿದ್ದ ಭೊಟೆಕೋಶಿ-ತ್ರಿಶೂಲಿ ಪ್ರವಾಹಕ್ಕೆ ಸಂಬಂಧಿಸಿದ ಎಲ್ಲ ಅಗತ್ಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು 40 ದಿನಗಳ ಬಳಿಕ ಸೋಮವಾರ ನೇಪಾಳ ಅಮಾನತುಗೊಳಿಸಿದೆ. ಈ ಪ್ರವಾಹದಲ್ಲಿ 1,455 ಮಂದಿ ಮೃತಪಟ್ಟಿದ್ದು, 5,285 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ. 


ನೇಪಾಳ ಸರಕಾರವು ಮರುನಿರ್ಮಾಣ ಮತ್ತು ಪುನರ್ವಸತಿಯತ್ತ ತನ್ನ ಗಮನವನ್ನು ಹರಿಸಿದೆ.

ನಾಪತ್ತೆಯಾದವರ ಪೈಕಿ 189 ಮಂದಿ ಭಾರತೀಯರು ಹಾಗೂ ವಿದೇಶಿ ಪಾಸ್ ಪೋರ್ಟ್ ಗಳನ್ನು ಹೊಂದಿರುವ ನೂರಾರು ಭಾರತೀಯ ಮೂಲದ ವಿದೇಶೀಯರು ಸೇರಿದ್ದಾರೆ.

ಪ್ರಧಾನಿ ಬಾಲೇಂದ್ರ ಶಾ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣೆ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳು, ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ತಂಡಗಳು ನೀಡಿದ್ದ ಶಿಫಾರಸುಗಳನ್ನು ಆಧರಿಸಿ ಈ ಸಭೆ ನಡೆಯಿತು.

ಸಚಿವಾಲಯಗಳು ಹಾಗೂ ಸಂಸ್ಥೆಗಳು ಸಲ್ಲಿಸಿರುವ ಶಿಫಾರಸುಗಳನ್ನು ಆಧರಿಸಿ ಮರು ನಿರ್ಮಾಣ ಮತ್ತು ಪುನರ್ವಸತಿ ಕಾರ್ಯಕ್ರಮಗಳಿಗಾಗಿ 559 ಕೋಟಿ ನೇಪಾಳಿ ರೂಪಾಯಿಯ ಬಿಡುಗಡೆಗೆ ಅನುಮೋದನೆ ನೀಡುವಂತೆ ಹಣಕಾಸು ಸಚಿವಾಲಯಕ್ಕೆ ಮಂಡಳಿ ಶಿಫಾರಸು ಮಾಡಿದೆ. ಇದರೊಂದಿಗೆ ಇನ್ನೂ ಮೌಲ್ಯಮಾಪನ ಮಾಡದ ಯೋಜನಾ ವೆಚ್ಚಗಳಿಗೆ ಅಗತ್ಯವಿರುವ ಹೆಚ್ಚುವರಿ ನಿಧಿಯನ್ನು ಬಿಡುಗಡೆಗೊಳಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವಹಿಸಲಾಗಿದೆ.

ನೇಪಾಳ ಪ್ರವಾಸೋದ್ಯಮ ಇಲಾಖೆಯ ಇತ್ತೀಚಿನ ದತ್ತಾಂಶಗಳ ಪ್ರಕಾರ, 36 ದೇಶಗಳ 606 ವಿದೇಶಿ ಪ್ರವಾಸಿಗರು ಈಗಲೂ ನಾಪತ್ತೆಯಾಗಿದ್ದಾರೆ. ಈ ಪೈಕಿ 189 ಭಾರತೀಯರು, 65 ಅಮೆರಿಕನ್ನರು, 55 ಮಲೇಷಿಯನ್ನರು, 54 ಉಕ್ರೇನಿಯನ್ನರು, 37 ಚೀನೀಯರು, ಆಸ್ಟ್ರೇಲಿಯಾ ಮತ್ತು ಲಾಟ್ವಿಯಾದ ತಲಾ 33 ಮಂದಿ, 32 ಬ್ರಿಟಿಷರು ಹಾಗೂ 30 ಕೆನಡಾ ಪ್ರಜೆಗಳು ಸೇರಿದ್ದಾರೆ. ಇದರೊಂದಿಗೆ 188 ಮಂದಿ ನೇಪಾಳಿ ಪ್ರವಾಸಿಗರೂ ನಾಪತ್ತೆಯಾಗಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries