HEALTH TIPS

ಎನ್‌ಸಿಇಆರ್‌ಟಿಯಿಂದ 20 ಗಂಟೆಗಳ AI ಪಠ್ಯಕ್ರಮ ಪರಿಚಯ: ಇನ್ನು ಮುಂದೆ ಶಾಲೆಗಳಲ್ಲೂ ಡೀಪ್‌ಫೇಕ್ ಕುರಿತ ಪಾಠ !

ನವದೆಹಲಿ:  ಇನ್ನು ಮುಂದೆ 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿರುವ ಕಂಪ್ಯೂಟೇಷನಲ್ ಥಿಂಕಿಂಗ್ (ಸಿಟಿ) ಮತ್ತು ಕೃತಕ ಬುದ್ಧಿಮತ್ತೆ (ಎಐ) ಕುರಿತ 20 ಗಂಟೆಗಳ ಪರಿಚಯಾತ್ಮಕ ಪಠ್ಯಕ್ರಮವನ್ನು ಅಧ್ಯಯನ ಮಾಡಲಿದ್ದಾರೆ.


ಇದರಲ್ಲಿ ದೈನಂದಿನ ಅಪ್ಲಿಕೇಶನ್‌ಗಳಲ್ಲಿ ಕೃತಕ ಬುದ್ದಿಮತ್ತೆ (ಎಐ)ಬಳಕೆ, ಉದಾಹರಣೆಗಳ ಮೂಲಕ ಮೆಷಿನ್ ಲರ್ನಿಂಗ್ ಅನ್ನು ಅರ್ಥ ಮಾಡಿಕೊಳ್ಳುವುದು, ಡೀಪ್ ಫೇಕ್‌ಗಳನ್ನು ಪತ್ತೆ ಹಚ್ಚುವುದು ಮತ್ತು ವೈಯುಕ್ತಿಕ ದತ್ತಾಂಶಗಳನ್ನು ರಕ್ಷಿಸಲು ನೈತಿಕ ಮಿತಿಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಲಿದ್ದಾರೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಆರ್‌ಟಿ)ಯು ಐಐಟಿ ಮದ್ರಾಸ್ ಮತ್ತು ಐಐಟಿ ಜೋಧ್‌ಪುರದೊಂದಿಗೆ ಸಮಾಲೋಚನೆ ನಡೆಸಿ ಈ ಚಟುವಟಿಕೆ ಆಧಾರಿತ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಿದೆ.

ಈ ಪಠ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು, ಅದರ ಮಿತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೃತಕ ಬುದ್ಧಿ ಮತ್ತೆ ನೀಡುವುದನ್ನು ಹಾಗೆಯೇ ನಂಬದೆ, ಅದನ್ನು ಪರಿಶೀಲಿಸುವ ಅಭ್ಯಾಸವನ್ನು ಬೆಳೆಸುತ್ತದೆ. ಅಲ್ಲದೆ ಕೃತಕ ಬುದ್ಧಿಮತ್ತೆಯ ಎಚ್ಚರಿಕೆಯ ಆತ್ಮವಿಶ್ವಾಸದ, ಸೃಜನಶೀಲ ಮತ್ತು ಜವಾಬ್ದಾರಿಯುತ ಬಳೆಕದಾರರು ಹಾಗೂ ಮೌಲ್ಯಮಾಪಕರಾಗಲು ಸಹಾಯ ಮಾಡುತ್ತದೆ.

''ಕೃತಕ ಬುದ್ಧಿ ಮತ್ತೆಯ ಯಾವುದೇ ಪೂರ್ವ ಜ್ಞಾನವಿಲ್ಲದ, ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಸಲಾದ ಈ ಪಠ್ಯಕ್ರಮ ತಾರ್ಕಿಕ ಚಿಂತನೆ, ಸೃಜನಶೀಲತೆ ಮತ್ತು ಸಮಸ್ಯೆ ಬಗೆಹರಿಸುವಿಕೆಯನ್ನು ಉತ್ತೇಜಿಸುತ್ತದೆ. ಇದು ಸಮಸ್ಯೆ ಬಗೆಹರಿಸುವ ಒಂದು ವ್ಯವಸ್ಥಿತ ವಿಧಾನವಾಗಿ ಸಿಟಿ ಅನ್ನು ಪರಿಚಯಿಸುತ್ತದೆ. ಕಲಿಯುವವರಿಗೆ ಕೃತಕ ಬುದ್ಧಿಮತ್ತೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಮತ್ತು ಅದರ ಅಪ್ಲಿಕೇಶನ್‌ಗಳು, ಸಾಧ್ಯತೆಗಳು ಮತ್ತು ಮಿತಿಗಳನ್ನು ಅರ್ಥ ಮಾಡಿಕೊಳ್ಳಲು ನೆರವು ನೀಡುತ್ತದೆ'' ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries