HEALTH TIPS

ಭಯೋತ್ಪಾದನೆಯನ್ನು ರಾಜತಾಂತ್ರಿಕ ಅಸ್ತ್ರವಾಗಿ ಬಳಸುವುದು ಅಕ್ಷಮ್ಯ, ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ: ಎಸ್. ಜೈಶಂಕರ್

ನವದೆಹಲಿ: ಭಯೋತ್ಪಾದನೆಯನ್ನು ರಾಜತಾಂತ್ರಿಕ ಅಸ್ತ್ರವಾಗಿ ಬಳಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಅದನ್ನು ಎಂದಿಗೂ ಸಮರ್ಥಿಸಲು ಅಥವಾ ತರ್ಕಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಎಂದು ಹೇಳಿದ್ದಾರೆ.


ನವದೆಹಲಿಯಲ್ಲಿ ನಡೆದ 'ಚಿನ್ಮಯ ಅಮೃತ್ ಮಹೋತ್ಸವ ಜಾಗತಿಕ ಸಮ್ಮೇಳನ'ದಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ದಿನದಂದೇ ಜಾಗತಿಕ ಭದ್ರತೆ ಹಾಗೂ ಭಯೋತ್ಪಾದನೆ ತಡೆ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದರು.

ಕೆಲವು ದೇಶಗಳು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸದಿರುವುದರಿಂದ ಈ ಬೆದರಿಕೆ ಮುಂದುವರಿದಿದೆ. ಇತಿಹಾಸದಲ್ಲಿ ಭಯೋತ್ಪಾದನೆಯಿಂದ ಕಲಿಯಬೇಕಾದ ಹಲವು ಪಾಠಗಳಿದ್ದರೂ, ಕೆಲವು ದೇಶಗಳು ಇಂದಿಗೂ ರಾಜಕೀಯ ಲೆಕ್ಕಾಚಾರಗಳಿಗೆ ಆದ್ಯತೆ ನೀಡುತ್ತಿವೆ ಎಂದು ಟೀಕಿಸಿದರು.

ಇದೇ ವೇಳೆ ಜಗತ್ತಿನ ವಿವಿಧ ಭಾಗಗಳಲ್ಲಿ ಸಂಘರ್ಷಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಾಂತಿಯ ಮಹತ್ವವನ್ನು ಎಂದು ಜೈಶಂಕರ್ ಅವರು ಒತ್ತಿ ಹೇಳಿದರು.

ಶಾಂತಿ ಅವಿಭಾಜ್ಯವಾದುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಒಂದು ಪ್ರದೇಶದಲ್ಲಿ ನಡೆಯುವ ಯುದ್ಧವು ಜಗತ್ತಿನ ಎಲ್ಲೆಡೆ ಶಾಂತಿಗೆ ಬೆದರಿಕೆಯೊಡ್ಡುತ್ತದೆ ಎಂದು ಹೇಳಿದರು.

ಪ್ರಸ್ತುತ ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ಉಲ್ಲೇಖಿಸಿದ ಜೈಶಂಕರ್, ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಗಳೇ ಸಮಸ್ಯೆಗಳಿಗೆ ಪರಿಹಾರ ಎಂಬ ಭಾರತದ ನಿಲುವು ಜಾಗತಿಕ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಿದರು.

ಭಯೋತ್ಪಾದನೆಯು ಶಾಂತಿಗೆ ಮತ್ತೊಂದು ಮಾರಕ ಬೆದರಿಕೆಯಾಗಿದೆ. ಅದನ್ನು ರಾಜ್ಯದ ನೀತಿಯ ಅಸ್ತ್ರವಾಗಿ ಬಳಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಅದನ್ನು ಎಂದಿಗೂ ಸಮರ್ಥಿಸಲು ಸಾಧ್ಯವಿಲ್ಲ, ತರ್ಕಬದ್ಧಗೊಳಿಸಲೂ ಸಾಧ್ಯವಿಲ್ಲ. ಆದರೂ, ಎಲ್ಲ ದೇಶಗಳೂ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಪ್ರದರ್ಶಿಸದಿರುವುದರಿಂದ ಅದು ಮುಂದುವರಿದಿದೆ. ಇತಿಹಾಸವು ಅನೇಕ ಪಾಠಗಳನ್ನು ಕಲಿಸಿದ್ದರೂ, ಕೆಲವು ದೇಶಗಳು ಇನ್ನೂ ರಾಜಕೀಯ ಲೆಕ್ಕಾಚಾರಗಳಿಗೆ ಆದ್ಯತೆ ನೀಡುತ್ತಿವೆ.

ಹೀಗಾಗಿ, ಈ ಸಾಮಾನ್ಯ ಬೆದರಿಕೆಯ ಬಗ್ಗೆ ಜಗತ್ತು ಇನ್ನಷ್ಟು ಜಾಗರೂಕತೆ ಬೆಳೆಸಿಕೊಳ್ಳಬೇಕು. ಭಯೋತ್ಪಾದನೆಯ ಎಲ್ಲ ರೂಪಗಳು ಮತ್ತು ಸ್ವರೂಪಗಳನ್ನು ಎದುರಿಸಲು ದೇಶಗಳು ಒಗ್ಗೂಡಿ, ಹೆಚ್ಚು ದೃಢ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. 






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries