ಕಾಸರಗೋಡು: ಚೆರ್ಕಳ ಸನಿಹದ ಬೇವಿಂಜದಲ್ಲಿ ನಿರ್ಮಾಣ ಹಂತದ ಮನೆಯಿಂದ ಮೂರು ಲಕ್ಷ ರೂ. ಮೌಲ್ಯದ ವಿದ್ಯುತ್ ವಯರ್ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಕಲ ತೊಟ್ಟಿ ಕಿಳಕ್ಕೇಕರ ನಿವಾಸಿ ರತೀಶ್ (36) ಹಾಗೂ ಕರುಣಾಕರನ್ (64)ಬಂಧಿತರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆಪ್ಟಂಬರ್ 17ರಂದು ರಾತ್ರಿ ಹಾಗೂ 18ರ ನಸುಕಿನ ಮಧ್ಯೆ ಕಳವು ನಡೆಸಲಾಗಿದೆ. ಬೇವಿಂಜದ ಎಂ.ಟಿ ಅಬ್ದುಲ್ ಕಬೀರ್ ಎಂಬವರು ನಿರ್ಮಿಸುತ್ತಿರುವ ಮನೆಯಿಂದ ಬೈಕ್‍ನಲ್ಲಿ ತಲುಪಿದ ತಂಡ ವಯರ್ ಸಾಗಿಸಿದೆ. ಮೊಬೈಲ್ ಲೊಕೇಶನ್, ಗುಜರಿ ಅಂಗಡಿಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳ ಗುರುತು ಪತ್ತೆಹಚ್ಚಲಾಗಿದೆ. ಇವರಿಬ್ಬರೂ ಮರದ ಕೆಲಸ ನಡೆಸುವ ಕಾರ್ಮಿಕರಾಗಿದ್ದಾರೆ.

