ಬದಿಯಡ್ಕ: ಬದಿಯಡ್ಕ ಪೆÇಲೀಸ್ ಠಾಣೆ ವ್ಯಾಪ್ತಿಯ ಪೆರ್ಲ ಸನಿಹದ ಬೇಂಗಪದವಿನಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬಾತ ಗಾಯಗೊಂಡಿದ್ದಾನೆ.
ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಸಂಬಂಧಿಸಿದ ವಿವಾದ ಘರ್ಷಣೆಗೆ ಕಾರಣವಾಗಿದೆ. ಘಟನೆಯಲ್ಲಿ ತ್ರಿಶೂರ್ ಜಿಲ್ಲೆಯ ಜೀಲಕ್ಕರ ನಿವಾಸಿ ಹಾಗೂ ಪ್ರಸಕ್ತ ಪೆರ್ಲ ಬೇಂಗಪದವಿನಲ್ಲಿ ವಾಸಿಸುತ್ತಿರುವ ವಿಜಯನ್ (44) ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಹ ಕಾರ್ಮಿಕ ಅಜಿಕುಮಾರ್ (43)ನನ್ನು ಪೆÇಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಬೇಂಗಪದವಿನ ರಬ್ಬರ್ ತೋಟವೊಂದರಲ್ಲಿ ಘಟನೆ ನಡೆದಿದೆ. ವಿಜಯನ್ ಹಾಗೂ ಅಜಿಕುಮಾರ್ ಇಬ್ಬರೂ ಈ ತೋಟದಲ್ಲಿ ಕಾರ್ಮಿಕರಾಗಿದ್ದು ಈ ಹಿಂದೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಪರಸ್ಪರ ಬೇರ್ಪಟ್ಟಿದ್ದರು ಎನ್ನಲಾಗಿದೆ.
ಸೋಮವಾರ ಇಬ್ಬರ ನಡುವೆ ಮತ್ತೆ ತಕರಾರು ಉಂಟಾಗಿದ್ದು ಈ ವೇಳೆ ಅಜಿ ಕುಮಾರ್ ಕೈಯಲ್ಲಿದ್ದ ಕಬ್ಬಿಣದ ರಾಡ್‍ನಿಂದ ವಿಜಯನ್ ಅವರ ತಲೆಗೆ ಹೊಡೆದು, ಬಳಿಕ ಚಾಕುವಿನಿಂದ ಬಲಗೈಗೆ ಇರಿದಿದ್ದನು. ನಂತರ ಚಾಕುವಿನಿಮದ ಕತ್ತಿನಭಾಗಕ್ಕೆ ಇರಿಯಲು ಯತ್ನಿಸಿದಾಗ ವಿಜಯನ್ ಕೈಯಿಂದ ತಡೆದಿದ್ದಾರೆ. ಇದರಿಂದ ಹೆಚ್ಚಿನ ಅಪಾಯ ತಪ್ಪಿದೆ ಎನ್ನಲಾಗಿದೆ. ಗಾಯಗೊಂಡ ವಿಜಯನ್ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

