ಕಾಸರಗೋಡು: ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ 25 ವರ್ಷಗಳನ್ನು ಪೂರೈಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಗೌರವ ಸೂಚಕವಾಗಿ, ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತಿರುವ 'ಸೇವಾ ಸಂಕಲ್ಪ ಅಭಿಯಾನ'ದ ಅಂಗವಾಗಿ ಅ.7ರಂದು ಕಾಸರಗೋಡಿನಲ್ಲಿ ಮೆಗಾ ಸೇವಾ ಜ್ಯೋತಿ ಯಾತ್ರೆ ನಡೆಯಲಿರುವುದು.ಕಾರ್ಯಕ್ರಮದ ಅಂಗವಾಗಿ ನಡೆಯುವ ಸೇವಾ ಜ್ಯೊತಿಬೈಕ್‍ಗಳು ಬೆಳಗ್ಗೆ 9.30ಕ್ಕೆ ಪಿಲಿಕುಂಜೆ ಟೌನ್ ಹಾಲ್ ವಠಾರ ತಲುಪಲಿವೆ.
ನಂತರ ಟೌನ್ ಹಾಲ್ ಸಭಾಂಗಣದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆನ್‍ಲೈನ್ಕಾರ್ಯಕ್ರಮ ಪ್ರಸಾರಗೊಳ್ಳುವುದು. ನಂತರ ಮೆಗಾ ಜ್ಯೋತಿ ಯಾತ್ರೆಯು ಅಧಿಕೃತವಾಗಿ ಪ್ರಯಾಣ ಆರಂಭಿಸಲಿದೆ.

