ಮಂಜೇಶ್ವರ: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘಟನೆ(ಕೆ.ಎಸ್.ಎಸ್.ಪಿ.ಯು) ಮಂಚೇಶ್ವರಂ ಬ್ಲಾಕ್ ಸಮಿತಿ ವತಿಯಿಂದ'ವಿಶ್ವ ವಯೋಜನ'ದಿನಾಚರಣೆ ಹಾಗೂ ಸಾಧಕರಿಗೆಸನ್ಮಾನ ಸಮಾರಂಭ ಹೊಸಂಗಡಿ ಶ್ರೀ ನಿತ್ಯಾನಂದ ಧ್ಯಾನ ಮಂದಿರದಲ್ಲಿ ಆಚರಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಜಯರಾಮ್ ಪ್ರಕಾಶ್ ಸಮಾರಂಭ ಉದ್ಘಾಟಿಸಿದರು. ಬ್ಲಾಕ್ ಸಮಿತಿ ಅಧ್ಯಕ್ಷ ರವಿಚಂದ್ರ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಯಕ್ಷಗಾನಕ್ಕೆ ಮಹತ್ವದ ಕೊಡುಗೆ ನೀಡಿದ, ಕೇರಳ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಸಬ್ಬಣಕೋಡಿ ರಾಮ್ ಭಟ್ ಮತ್ತು ರಮೇಶ್ ಬಾಯಾರ್ ಅವರನ್ನು ಸನ್ಮಾನಿಸಲಾಯಿತು.
ಮಂಚೇಶ್ವರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಭಾಕರ ರೈ ಅವರು ನಾವು ಎದುರಿಸುತ್ತಿರುವ ರೋಗಗಳು ಮತ್ತು ಅವುಗಳ ಪರಿಹಾರಗಳ ವಿಷಯದ ಕುರಿತು ಮಾಹಿತಿ ನೀಡಿದರು. ವಕೀಲ ಬಾಲಕೃಷ್ಣ ಶೆಟ್ಟಿ ಅವರು ವೃದ್ಧರ ಹಕ್ಕುಗಳು ಮತ್ತು ಅವರು ಎದುರಿಸುತ್ತಿರುವ ದೌರ್ಜನ್ಯಗಳ ವಿರುದ್ಧ ಕಾನೂನಿನ ರಕ್ಷಣೆಯ ಕುರಿತು ಮಾತನಾಡಿದರು.
ಪುಂಡಲೀಕ ನಾಯಕ್ ಪ್ರಾರ್ಥನೆ ಹಾಡಿದ್ದರು. ಸಂಘಟನೆ ಬ್ಲಾಕ್ ಕಾರ್ಯದರ್ಶಿ ಶೀನಪ್ಪ ಪೂಜಾರಿ ಅಲಾರ್ ಸ್ವಾಗತಿಸಿ,ನಾರಾಯಣ ವೈ ವಂದಿಸಿದರು.



